ದೀಪಕ್ ಬಾಕ್ಸರ್ ಬಂಧಿಸಿದ ದೆಹಲಿ ಪೊಲೀಸರು

ದೆಹಲಿ :ಫೆಡರಲ್ ದೆಹಲಿ ಪೊಲೀಸರ ವಿಶೇಷ ತಂಡವು ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸಹಾಯದಿಂದ ದೀಪಕ್ ಬಾಕ್ಸರ್‌ನನ್ನು ಮೆಕ್ಸಿಕೊದಲ್ಲಿ ಸೆರೆ ಹಿಡಿದಿದೆ.
2021ರಲ್ಲಿ ಜಿತೇಂದ್ರ ಗೋಗಿ ಹತ್ಯೆಯ ನಂತರ, ದೀಪಕ್ ‘ಗೋಗಿ ಗ್ಯಾಂಗ್’ ಅನ್ನು ಮುನ್ನಡೆಸಲು ಪ್ರಾರಂಭಿಸಿದ್ದ. ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಜಿತೇಂದ್ರ ಗೋಗಿ ಅವರನ್ನು ಹತ್ಯೆ ಮಾಡಲಾಗಿತ್ತು.
ದೀಪಕ್ ಬಾಕ್ಸರ್ ಬಂಧನಕ್ಕಾಗಿ ಎಫ್‌ಬಿಐ ಸೇರಿದಂತೆ ಮೆಕ್ಸಿಕೊದ ಪೊಲೀಸರು ನಮಗೆ ಸಹಾಯ ಮಾಡಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ (ಸಿಪಿ) ಎಚ್‌ಜಿಎಸ್ ಧಲಿವಾಲ್ ಅವರು ಕಾರ್ಯಾಚರಣೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿ ಪೊಲೀಸರು ಭಾರತದ ಹೊರಗೆ ಗ್ಯಾಂಗ್ಸ್ಟರ್ನನ್ನು ಬಂಧಿಸಿರುವುದು ಇದೇ ಮೊದಲು. ದೀಪಕ್ನನ್ನು ಹುಡುಕಿಕೊಟ್ಟವರಿಗೆ ಪೊಲೀಸರು 3 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
‘ದೆಹಲಿ-ಎನ್‌ಸಿಆರ್‌ನಲ್ಲಿ ವ್ಯಾಪ್ತಿಯಲ್ಲಿ ದೀಪಕ್ ಬಾಕ್ಸರ್ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಆಗಿದ್ದ. ಆತನಿಗಾಗಿ ದೆಹಲಿಯ ವಿಶೇಷ ತಂಡ ಹಲವು ತಿಂಗಳಿಂದ ಹುಡುಕಾಟ ನಡೆಸಿತ್ತು’ ಎಂದು ಧಲಿವಾಲ್ ತಿಳಿಸಿದ್ದಾರೆ.