ವರದಿಗಾರರ ಕೂಟದಲ್ಲಿ ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ

Demonstration of electronic voting machine at press conference

ವರದಿಗಾರರ ಕೂಟದಲ್ಲಿ ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ

ದಾವಣಗೆರೆ : ಬುಧವಾರ  ಜಿಲ್ಲಾ ವರದಿಗಾರರ ಒಕ್ಕೂಟದಲ್ಲಿ ನಡೆದ ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ಮತದಾನ ಖಾತ್ರಿ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆ ವಿಷಯದಲ್ಲಿ ವಿಶ್ವಾಸ ಮೂಡಿಸಲು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1423674 ಮತದಾರರಿದ್ದು, ನಿರಂತರವಾಗಿ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾಲವಕಾಶ ಜಾರಿಯಲ್ಲಿದೆ. ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಈ ಬಾರಿ 80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಹಾಗೂ ಅನಾರೋಗ್ಯ, ಕೋರೋನ ಪೀಡೀತರಿಗೆ ಮನೆಯಲ್ಲೇ ಮತ ಚಲಾಯಿಸುವ ಅವಕಾಶ ನೀಡಿದೆ. ಚುನಾವಣೆ ಪ್ರಕ್ರಿಯೆಗೆ 15 ವಿವಿಧ ತಂಡಗಳನ್ನು ರಚಿಸಿ ನಿರತಂರವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗದೆ.
ಜಿಲ್ಲೆಯಲ್ಲಿ ಒಟ್ಟು 164 ವಲಯ ಅಧಿಕಾರಿಗಳು ಹಾಗೂ 41 ಚೆಕ್ ಪೋಸ್ಟ್‍ಗಳಲ್ಲಿ 123 ಸ್ಟಾಟಿಕ್ಸ್ ಸರ್ವೇಂಟ್‍ಗಳು ನೇಮಿಸಿ, 7 ಲೆಕ್ಕಪತ್ರ ತಂಡವನ್ನು ರಚಿಸಲಾಗಿದೆ ಒಂದು ತಂಡವು 8ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದರು.
ಚುನವಣಾ ಸಮಯದಲ್ಲಿ ಬ್ಯಾನರ್ಸ್, ಬಂಟಿಂಗ್ಸ್, ರೋಡಿಂಗ್ಸ್‍ಗಳನ್ನು ಹಾಕಿದ್ದಲ್ಲಿ ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತದೆ ಹಾಗೂ ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡವರಿಗೆ ಮತ್ತು ಮತದಾರರಿಗೆ ಆಸೆ ತೊರಿಸುವಂತ ಸಾಮಗ್ರಿಗಳನ್ನು ಸಂಗ್ರಹ ಮಾಡಿದಲ್ಲಿ ಅಂತವರ ಮೇಲೆ ದೂರನ್ನು ದಾಖಲಿಸಲಾಗುತ್ತದೆ. ಹಾಗೆ ಚುನಾವಣಾ ಸಾಮಾನ್ಯ ನೀತಿ ನಿಯಮಗಳನ್ನು ಹಂತ ಹಂತ ವಾಗಿ ಜಾರಿಗೊಳಿಸಲಾಗುತ್ತದೆ. ಪ್ರಥಮವಾಗಿ ಒಟ್ಟು 24 ಬ್ಯಾಲೆಟ್‍ಗಳನ್ನು ಒಂದು ಕಂಟ್ರೋಲ್ ಯುನಿಟ್‍ಗೆ ಸೇರಿಸಲಾಗಿದೆ.
ಬ್ಯಾಲೆಟ್ ಪೇಪರ್ ಬದಲಿಗೆ ಇವಿಎಂ ಮತಯಂತ್ರಗಳ ಬಳಕೆ ಹೇಗೆ ಮಾಡಲಾಗುತ್ತೆ. ಮತದಾನ ಖಾತ್ರಿ ಯಂತ್ರವಾದ ವಿವಿಪ್ಯಾಟ್ ಯಾವ ರೀತಿ ಕೆಲಸ ನಿರ್ವಹಿಸುತ್ತೆ. ಮತದಾನ ಮಾಡಿದ ನಂತರ ತಾವು ಬಯಸಿದ ಅಭ್ಯರ್ಥಿಗೆ ಮತ ಹೋಗಿದೆ ಎಂಬುದನ್ನು ಯಾವ ರೀತಿ ವಿವಿಪ್ಯಾಟ್ ಖಚಿತಪಡಿಸುತ್ತದೆ ಎಂಬುದನ್ನು ಜನರಿಗೆ ತಿಳಿಸಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಪ್ರಮುಖವಾಗಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೆಯೇ ವಿ.ವಿ ಪ್ಯಾಟ್ ಪ್ರಮುಖವಾಗಿದ್ದು, ಬ್ಯಾಲೆಟ್ ಯುನಿಟ್‍ನಲ್ಲಿ ಮತದಾನ ಮಾಡಿದ ನಂತರ ಕಂಟ್ರೋಲ್ ಯುನಿಟ್‍ನಲ್ಲಿ ಭದ್ರವಾಗಲಿದೆ ಎಂದು ಹೇಳಿದರು
ಮತದಾನ ಯಾರಿಗೆ ಮಾಡಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿ.ವಿ ಪ್ಯಾಟ್ ಸಹಕಾರಿ ಆಗಲಿದೆ. ವಿದ್ಯುನ್ಮಾನ ಮತಯಂತ್ರ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ವಿದ್ಯುನ್ಮಾನ ಮತಯಂತ್ರದಿಂದ ಮತದಾನ ಮಾಡುವುದು ಮಾದರಿ ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೊಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!