ಕರುನಾಡಿನಲ್ಲಿ ಡೆಂಗಿ ಚಿಕನ್ ಗುನ್ಯಾ ಅಬ್ಬರ.! ಜನರನ್ನ ಬಾಧಿಸುತ್ತಿದೆ ಡೆಂಗಿ ಮತ್ತು ಚಿಕನ್ ಗುನ್ಯ.!

ಬೆಂಗಳೂರು : ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಪರೀತ ಮಳೆ ಹಾಗೂ ವಾತಾವರಣ ಬದಲಾವಣೆ ಆಗುತ್ತಿರುವುದರಿಂದ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳು ಜನರನ್ನ ಬಾಧಿಸುತ್ತಿವೆ.

ಡೆಂಗಿ ಚಿಕನ್ ಗುನ್ಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳು ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 4055 ಡೆಂಗಿ ಪ್ರಕರಣಗಳು ಮತ್ತು ಎಂಟು ಶಂಕಿತ ಡೆಂಗಿ ಸಾವುಗಳು ವರದಿಯಾಗಿದೆ. ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳು ಹೆಚ್ಚಾಗಿ, ಡೆಂಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಇದರ ಹತೋಟಿಗೆ ಆರೋಗ್ಯ ಇಲಾಖೆ ಮುಂಜಾಗ್ರತ ಹಾಗೂ ನಿಯಂತ್ರಣ ಕ್ರಮಗಳನ್ನ ಸಮರೋಪಾದಿ ಯಾಗಿ ಹಮ್ಮಿಕೊಂಡು ಸರ್ಕಾರದಿಂದ ಜಂಟಿ ಸುತ್ತೋಲೆ ಅನುಷ್ಠಾನಗೊಳಿಸುತ್ತಿದೆ.

ಬಿನ್ನಿ ಹಾಗೂ ಚಿಕನ್ ಗುನ್ಯಾ ರೋಗವು ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ಮತ್ತು ಈ ವೈರಸ್ ಕಾಯಿಲೆಗೆ ಲಸಿಕಿ ಹಾಗೂ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದ್ದರಿಂದ ರೋಗ ನಿಯಂತ್ರಣಕ್ಕಾಗಿ ಈಡಿಸ್ ಸೊಳ್ಳೆಗಳ ನಿಯಂತ್ರಣವೇ ಅತಿ ಮುಖ್ಯ ವಿಧಾನ ವಾಗಿರುತ್ತದೆ.

ಈಡಿಸ್ ಸೊಳ್ಳೆಗಳು ಎಲ್ಲೆಲ್ಲಿ ಕಂಡು ಬರುತ್ತವೆ..

ಇನ್ನು ಇಡಿ ಸೊಳ್ಳೆಗಳು ಎಲ್ಲೆಲ್ಲಿ ಕಂಡು ಬರುತ್ತದೆ ಅನ್ನೋದನ್ನು ನೋಡುವುದಾದರೆ ಮನೆಗಳು, ಹೋಟೆಲ್ ಗಳು, ಅಂಗಡಿ- ಮುಂಗಟುಗಳು, ವಾಣಿಜ್ಯ ಸಂಕಿರಣಗಳು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಪ್ರದೇಶದಲ್ಲಿನ ನೀರಿನ ಶೇಖರಣೆಗಳಲ್ಲಿ ಹಾಗೂ ಇವುಗಳ ಸುತ್ತಮುತ್ತಲಿನ ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನಹರಿಸಬೇಕು.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ.

1. ಸಮರ್ಪಕ ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆ
2. ನಿರುಪಯುಕ್ತ ಹಾಗೂ ಘನ ತ್ಯಾಜ್ಯ ವಸ್ತುಗಳ ಶೀಘ್ರ ವಿಲೇವಾರಿ ಮತ್ತು ನಿರ್ವಹಣೆ
3. ಖಾಲಿ ನಿವೇಶನಗಳಲ್ಲಿ ಗಣ ತ್ಯಾಜ್ಯ ವಸ್ತುಗಳು ಸಂಗ್ರಹವಾಗುತ್ತಿದ್ದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವುದು
4. ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ನಾಗರಿಕ ನೀತಿ ಸಂಹಿತೆಯನ್ನ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು.
5. ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಮತ್ತು ನಿರ್ಮೂಲನಾ ಕಾರ್ಯವನ್ನು ಆಯಾ ನಗರ ಪಾಲಿಕೆಗಳ ವತಿಯಿಂದ ಕೈಗೊಳ್ಳುವುದು
6. ತುರ್ತು ಸಂದರ್ಭಗಳಲ್ಲಿ ಮಾತ್ರವೇ ಭಾರತ ಸರ್ಕಾರದಿಂದ ಅನುಮೋದಿತ ದುಮೀಕರಣ ರಾಸಾಯನಿಕವನ್ನು ಬಳಸಿ ಒಳಾಂಗಣ ದೂಮೀಕರಣವನ್ನು ಕೈಗೊಳ್ಳುವುದು
7. ಮನೆಯ ಸುತ್ತಮುತ್ತಲಿನ ಪರಿಸರ ಹಾಗೂ ಸರ್ಕಾರಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು, ಶಾಲೆ, ಆಸ್ಪತ್ರೆ ಆವರಣ, ಸಿನಿಮಾ ಮಂದಿರ, ಕೈಗಾರಿಕಾ ಪ್ರದೇಶಗಳು, ನಿರ್ಮಾಣ ಹಂತದ ಕಟ್ಟಡ ಹಾಗೂ ಮುಂತಾದ ಕಡೆಗಳಲ್ಲಿ ಸೊಳ್ಳೆ ತಾಣಗಳ ಸಮೀಕ್ಷೆ ಮತ್ತು ನಿರ್ಮೂಲನೆಗಾಗಿ ಕ್ರಮ ಕೈಗೊಳ್ಳುವುದು
8. ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆಗಳ ಬಳಕೆ, ಸೊಳ್ಳೆ ನಿರೋಧಕ ಬತ್ತಿ ಮುಲಾಮು ಇತ್ಯಾದಿಗಳ ಬಳಕೆಯ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಸಮುದಾಯವನ್ನು ಪ್ರೇರೇಪಿಸುವುದು
9. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಉದ್ದೇಶಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರೆತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಕ್ಷೇಮಾಭಿವೃದ್ಧಿ ಸಂಘಗಳನ್ನ ತೊಡಗಿಸಿಕೊಳ್ಳುವುದು
10. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರು ವಸತಿ ಪ್ರದೇಶಗಳಲ್ಲಿ ಸೊಳ್ಳೆ ತಾಣಗಳ ಸಮೀಕ್ಷೆ ಹಾಗೂ ನಿರ್ಮೂಲನ ಚಟುವಟಿಕೆಗಳನ್ನು ಕೈಗೊಳ್ಳುವುದರ ಜೊತೆಗೆ ವಲಸೆ ಕಾರ್ಮಿಕರು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು

ಒಟ್ಟಾರೆಯಾಗಿ ಸಾರ್ವಜನಿಕರ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರೋಗ ವಾಹಕ ಆಶ್ರಿತ ರೋಗಗಳ ಮುಂಜಾಗ್ರತ ಹಾಗೂ ನಿಯಂತ್ರಣ ಕ್ರಮಗಳನ್ನು ತಮ್ಮ ಜಿಲ್ಲೆಗಳಲ್ಲಿ ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ರಾಜ್ಯದಲ್ಲಿ ಡೆಂಗು ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದಿಂದ ಜಂಟಿ ಸುತ್ತೋಲೆ ಸೂಚಿಸಿದೆ

Leave a Reply

Your email address will not be published. Required fields are marked *

error: Content is protected !!