ಸಿದ್ದನೂರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಲೋಕೋಪಯೋಗಿ ಇಲಾಖೆ! ಗ್ರಾಮಗಳ ರಸ್ತೆ ನಾಮಫಲಕದಲ್ಲಿ ಸಿದ್ಧನೂರು ಗ್ರಾಮದ ಹೆಸರು ಬರೆಸಲು ಒತ್ತಾಯ!

ದಾವಣಗೆರೆ : ರಾಷ್ಟ್ರೀಯ ಹೆದ್ದಾರಿ ರಸ್ತೆಯೊಂದರಲ್ಲಿ ಮೊದಲಿಗೆ ಬರುವ ಗ್ರಾಮದ ಹೆಸರನ್ನು ಬರೆಸದೆ ನಂತರದ ಗ್ರಾಮದ ಹೆಸರನ್ನು ಬರೆಸುವ ಮೂಲಕ ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕವಾಗಿ ನಾಮಫಲಕ ಅಳವಡಿಸಿದ್ದಾರೆ. ಇದು ಸಿದ್ದನೂರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಆನಗೋಡು ಗ್ರಾಮದ ಸಮೀಪದ ಸಿದ್ಧನೂರು ಗ್ರಾಮಕ್ಕೆ ಹೋಗುವ ದಾರಿಯ ನಾಮಫಲಕವನ್ನು ಅಳವಡಿಸಲಾಗಿದ್ದು, ಈ ನಾಮಫಲಕ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ನಾಮಫಲಕಗಳಲ್ಲಿ ಮೊದಲಿಗೆ ಬರುವ ಗ್ರಾಮ ಸಿದ್ಧನೂರು, ಆದರೆ ಸಿದ್ದನೂರು ಗ್ರಾಮವನ್ನು ಹೊರತುಪಡಿಸಿ ನಂತರದಲ್ಲಿ ಬರುವ ಅಗಸನಕಟ್ಟೆ ಗ್ರಾಮದ ಹೆಸರನ್ನು ಬರೆಸಿದ್ದಾರೆ.


ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎಲ್ಲಾ ಹತ್ತಿರದ ಗ್ರಾಮಗಳ ಹೆಸರನ್ನು ನಾಮಫಲಕಗಳಲ್ಲಿ ಬರೆಸಿ ಅಳವಡಿಸಿದ್ದಾರೆ, ಆದರೆ ಆನಗೋಡು ಬಳಿಯಲ್ಲಿ ಬರುವ ಸಿದ್ಧನೂರು ಗ್ರಾಮದ ಹೆಸರನ್ನು ಬರೆಸುವ ಬದಲಿಗೆ ನಂತರದ ಗ್ರಾಮದ ಹೆಸರನ್ನು ಬರೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಆದಷ್ಟುಬೇಗ ಈ ನಾಮಫಲಕದಲ್ಲಿ ಸಿದ್ಧನೂರು ಗ್ರಾಮದ ಹೆಸರನ್ನು ಬರೆಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಸಿದ್ದನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!