ದೇವರ ಬೆಳಕೆರೆ ಡ್ಯಾಮ್ ಗೆ ಭೇಟಿ ನೀಡಿದ ಡಿಸಿ.! ಮಹಾಂತೇಶ್ ಬೀಳಗಿ ಡ್ಯಾಂ ಪರಿಶೀಲನೆ ವೇಳೆ ಕಂಡಿದ್ದು ಏನು.?

ದಾವಣಗೆರೆ: ಇತ್ತೀಚೆಗೆ ಮಾಧ್ಯಮಗಳಲ್ಲಿ ದೇವರ ಬೆಳಕೆರೆ ಡ್ಯಾಮ್ ನಲ್ಲಿ ಬಿರುಕು ಎಂಬ ಸುದ್ದಿ ಹಾಗೂ ಡ್ಯಾಮ್ ನಲ್ಲಿ ಸಂಗ್ರಹಕ್ಕಿಂತ ಹೆಚ್ಚು ನೀರು ಸಂಗ್ರಹ ಮತ್ತು ಕ್ರಸ್ಟ್ ಗೇಟ್ ಗಳಿಂದ ನೀರು ಹೊರ ಹೋಗುತ್ತಿಲ್ಲ ಎಂಬ ಮಾಹಿತಿಯಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇಂದು ಡ್ಯಾಮ್ ವೀಕ್ಷಿಸಿದರು
ಸಂಭಂಧಿಸಿದ ಎಂಜನಿಯರ್ ಗಳಿಗೆ ಕೂಡಲೆ ಡ್ಯಾಮ್ ನ ಕ್ರಸ್ಟ್ ಗೇಟ್ ಹಾಗೂ ಸುತ್ತಲೂ ಬೆಳೆದಿರುವ ಕಳೆ ಗಿಡಗಳನ್ನು ತೆರವುಗೊಳಿಸಲು ಸೂಚಿಸಿದರು