ಧರ್ಮಸ್ಥಳ ಸಂಘದಿಂದ ಸ್ವಸಹಾಯ ಸಂಘಗಳಿಗೆ ನೆರವು

ಹೊನ್ನಾಳಿ.ಜು.15; ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ಸುರೇಶ. ಜಿಲ್ಲಾ ಯೋಜನಾಧಿಕಾರಿ ಜಯಂತ್ ಪೂಜಾರ್ ಮಾತನಾಡಿ ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 1844 ಸಂಘಗಳಿದ್ದು ಈ ಸಂಘಗಳಿಗೆ ಒಟ್ಟು ಲಾಭಾಂಶ 2 ಕೋಟಿ ಹದಿನೈದು ಲಕ್ಷ 79 ಸಾವಿರ ಹಣ ಬಿಡುಗಡೆಯಾಗಿದೆ ಖಾವಂದರ ಅಪ್ಪಣೆಯಂತೆ ಎಲ್ಲಾ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಯೋಜನೆಯ ಪಿಒ ಬಸವರಾಜ ಅಂಗಡಿ.ಪೊಲೀಸ್ ಇಲಾಖೆಯ ಸಿಪಿಐ ದೇವರಾಜ್ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಉಮಾಪತಿ ಜನಜಾಗೃತಿ ವೇದಿಕೆಯ ಸದಸ್ಯರಾದ ಕುಮಾರಸ್ವಾಮಿ ಬಿ ಎಲ್.ಮಂಜಪ್ಪ ಸರಳಿನಮನೆ. ಕತ್ತಿಗೆ ನಾಗರಾಜ್. ಶಿವರಾಂ. ರಾಘವೇಂದ್ರ. ವ್ಯವಸ್ಥಾಪಕ ನಾಗರಾಜ್. ಪ್ರದೀಪ್ ಆರ್ ಹೆಗಡೆ ಕೃಷಿ ಅಧಿಕಾರಿ.ಮಂಜುಳಾ. ಕಚೇರಿಯ ಎಲ್ಲ ಸಿಬ್ಬಂದಿ ವರ್ಗದವರಿದ್ದರು.
