Dhuda: ದುಡಾ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸಿದ ಅದ್ಯಕ್ಷ: ಕಂಟ್ರಾಕ್ಟರ್ ಬಿಲ್ ತಡೆಹಿಡಿಯಲು ಅಧಿಕಾರಿಗಳಿಗೆ ತಾಕಿತು
ದಾವಣಗೆರೆ: ನನ್ನ ಆಡಳಿತಾವಧಿಯಲ್ಲಿ ಯಾವುದೇ ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನಾಯಕ ಮತ್ತು ವಿವೇಕಾನಂದ ಬಡಾವಣೆಯಲ್ಲಿ ಪ್ರಗತಿಯಲ್ಲಿರುವ ಪಾರ್ಕ್ ಕಾಮಗಾರಿಗಳನ್ನು ವೀಕ್ಷಿಸಿ, ಕಾಮಗಾರಿ ಕಳಪೆಯಿಂದ ಕೂಡಿರುವುದರಿಂದ ಈ ವೇಳೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿ ಮಾಡಿರುವ ಟೆಂಡರುದಾರರ ಬಿಲ್ ತಡೆಹಿಡಿಯಲು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಈ ಕಾಮಗಾರಿಗಳ ಥರ್ಡ್ ಪಾರ್ಟಿ ಇನ್ ಸ್ಪೆಕ್ಷನ್ ಯಾವ ರೀತಿ ನಡೆಸಿ ಟೆಂಡರ್ ದಾರರಿಗೆ ಬಿಲ್ ಮಾಡಿಕೊಡುತ್ತೀರಾ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು, ಗುಣಮಟ್ಟದ ಕಾಮಗಾರಿಗಳನ್ನು ನಡೆಸಬೇಕೆಂದು ಸೂಚಿಸಿದರು.
ನನ್ನ ಆಡಳಿತ ಕಾಲಾವಧಿಯಲ್ಲಿ ಯಾವುದೇ ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಅವರು, ಕಳಪೆ ಕಾಮಗಾರಿ ಮಾಡಿರುವ ಟೆಂಡರುದಾರರ ಬಿಲ್ ತಡೆಹಿಡಿಯಲು ತಾಕಿತು ಮಾಡಿದರು.
ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಗೌರಮ್ಮ ಪಾಟೀಲ್, ಮಾರುತಿರಾವ್ ಘಾಟ್ಗೆ, ಆರ್ ಲಕ್ಷ್ಮಣ, ಪ್ರಾಧಿಕಾರದ ಅಭಿಯಂತರರಾದ ಸೃಜನ್ ಉಪಸ್ಥಿತಿರಿದ್ದರು.