ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ಗೆ ಅರ್ಜಿ ಆಹ್ವಾನ

ದಾವಣಗೆರೆ: ಹರಿಹರ ತಾಲ್ಲೂಕಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ 3+1 ವರ್ಷಗಳ ಅವಧಿಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರ ಮತ್ತು ಎಐಟಿಯುಸಿ ವತಿಯಿಂದ ಅನುಮೋದಿಸಲ್ಪಟ್ಟಿರುವ ಈ ಕೋರ್ಸ್ಗೆ ಅರ್ಜಿ ಸಲ್ಲಿಸುವವರು ರಾಜ್ಯದಲ್ಲಿ ಕನಿಷ್ಠ 5 ವರ್ಷ ವ್ಯಾಸಂಗ ಮಾಡಿರಬೇಕು. ಹಾಗೂ ಮೆರಿಟ್-ಕಂ-ರೋಸ್ಟರ್ ಪದ್ದತಿ ಮೂಲಕ ಶೇಕಡ 30 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗಾಗಿ ಕಾದಿರಿಸಲಾಗಿದೆ.
2 ವರ್ಷದ ಐ.ಟಿ.ಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಎಐಸಿಟಿಇ ಅಥವಾ ಡಿಟಿಇ ನಿಯಮದ ಪ್ರಕಾರ 2ನೇ ವರ್ಷದ ಡಿಪ್ಲೋಮಾ ತರಬೇತಿಗಳಿಗೆ ನೇರ ಪ್ರವೇಶ ಕಲ್ಪಿಸಲಾಗುವುದು.
ತರಬೇತಿಯಲ್ಲಿ ವಿಶೇಷವಾಗಿ ಸುಸಜ್ಜಿತ ಮೂಲಸೌಕರ್ಯಗಳು, ಆಧುನಿಕ ಹೈಟೆಕ್ ಯಂತ್ರೋಪಕರಣಗಳು, ಪ್ರಾಕ್ಟಿಕಲ್ ಇಂಟೆಗ್ರೇಟೆಡ್ ಆನ್‌ಜಾಬ್ ತರಬೇತಿ, ಅನುಭವಿ ತರಬೇತುದಾರರು ಹಾಗೂ ಪ್ಲೇಸ್‌ಮೆಂಟ್ ಸಹಯೋಗ ಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹರಿಹರ ತಾಲ್ಲೂಕು ಹರ್ಲಾಪುರ ಗ್ರಾಮ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸಮೀಪ ಕೆಐಎಡಿಬಿ ಇಂಡಸ್ಟಿçಯಲ್ ಏರಿಯಾ, 22 ಸಿ ಅಂಡ್ ಡಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು (ಮೊ.ಸಂಖ್ಯೆ-8711913947/ 9845941245) ಅಥವಾದೂ.ಸಂಖ್ಯೆ- 08192-243937/ 296840 ಸಂಪರ್ಕಿಸಬಹುದು.
