ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಕುಂದು ಕೊರತೆಗಳ ಸಭೆಯಲ್ಲಿ ಚರ್ಚೆ

 

ಹೊನ್ನಾಳಿ: ಈ ಸಭೆಗೆ ಶಿವಮೊಗ್ಗ ಜಿಲ್ಲಾ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ” ಉಪ ನಿರ್ದೇಶಕರಾದ ಕೃಷ್ಣ ಅವರು ಆಗಮಿಸಿ ಹೊನ್ನಾಳಿಯ ಹಳೇ ಆಸ್ಪತ್ರೆಯಲ್ಲಿರುವ ಮೀಟಿಂಗ್ ಹಾಲ್ ನಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಕುಂದು ಕೊರತೆಗಳ ಸಭೆಯಲ್ಲಿ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ಸಮಸ್ಯೆಗಳನ್ನು ಆಲಿಸಿದರು, ಮನವಿಗಳನ್ನು ಸ್ವೀಕರಿಸಿದರು ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ , ಜಮೀನು ಮಂಜೂರಾತಿ ಬಗ್ಗೆ , ಆಶ್ರಯ ಮನೆ ಯೋಜನೆಯ ಬಗ್ಗೆ ಮಾಜಿ ಸೈನಿಕರ ಮೀಸಲಾತಿಯ ಬಗ್ಗೆ ಮತ್ತು ಮಕ್ಕಳ ಶಿಕ್ಷಣದ ಮೀಸಲಾತಿಯ ಬಗ್ಗೆ ಮಾಹಿತಿಯನ್ನು ನೀಡಿದರು , ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ತಮ್ಮ ಸಮಸ್ಯೆ ಬಗ್ಗೆ ಶಿವಮೊಗ್ಗದಲ್ಲಿರುವ ಆಫೀಸ್ ಗೆ ಬಂದು ಮನವಿಯನ್ನು ಮಾಡಿಕೊಳ್ಳಬಹುದು ಎಂದು ಈ ಸಭೆಯಲ್ಲಿ ಎಲ್ಲಾ ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ತಿಳಿಸಿದರು , ಈ ಸಭೆಯಲ್ಲಿ ಮಾಜಿ ಸೈನಿಕರ ಕ್ಷೇಮಾಭವೃದ್ಧಿ ಸಂಘದ ಅಧ್ಯಕ್ಷರಾದ ನಿವೃತ್ತ ಸೇನಾಧಿಕಾರಿ ವಾಸಪ್ಪ ಎಂ , ಪರಮೇಶ್ವರಪ್ಪ ಅರಕೇರಿ , ಕೇಶವಮೂರ್ತಿ , ಕಾರ್ಯದರ್ಶಿಗಳಾದ ಮಂಜಪ್ಪ ನವರು , ಸಂಘದ ಪದಾಧಿಕಾರಿಗಳಾದ ಸಿದ್ದೇಶಪ್ಪ, ಹನುಮಂತಪ್ಪ, ರವಿಕುಮಾರ್, ಬಸವರಾಜಪ್ಪ , ರಾಮಪ್ಪ , ಚಂದ್ರಪ್ಪ, ಪರಮೇಶ್ವರಪ್ಪ, ಹಾಗೂ ಸದಸ್ಯರು ಅವರ ಅವಲಂಬಿತರು, ಸುಮಾರು 25 ರಿಂದ 30 ಜನ ಹಾಜರಿದ್ದರು , ಈ ಸಂದರ್ಭದಲ್ಲಿ ಉಪ ನಿರ್ದೇಶಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು , ಕಾರ್ಯದರ್ಶಿಗಳಾದ ಮಂಜಪ್ಪ ನವರು ವಂದಿಸಿದರು ,

ಇಂದ :- ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ (ರಿ) .

Leave a Reply

Your email address will not be published. Required fields are marked *

error: Content is protected !!