ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (DISHA) ಖಾತರಿಯಲ್ಲಿ ದಾಖಲೆ ನಿರ್ವಹಣೆ ಮಾಡದ ಅಧಿಕಾರಿಗಳ ಮೇಲೆ ಕ್ರಮ – ಜಿ.ಎಂ.ಸಿದ್ದೇಶ್ವರ

disha meeting

ದಾವಣಗೆರೆ: ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ದಿಶಾ ಸಮಿತಿ ಇದ್ದು ಸಮಿತಿ ಸದಸ್ಯರು ಕೇಂದ್ರ ಯೋಜನೆಯ ಪರಿಶೀಲನೆಗೆ ಆಗಮಿಸಿದಾಗ ಎಲ್ಲಾ ದಾಖಲೆಗಳನ್ನು ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇದಲ್ಲಿ ನಿರ್ಲಕ್ಷ್ಯತೆ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗೆ ಲೋಕಸಭಾ ಸದಸ್ಯರಾದ ಡಾ; ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಅವರು (ಆ.23) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಸದಸ್ಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾತರಿಯಡಿ ಕೈಗೊಂಡ ಕಾಮಗಾರಿಗಳ ಪರಿಶೀಲನೆಗೆ ಆಗಮಿಸುವ ಬಗ್ಗೆ ಮುಂಚಿತವಾಗಿ ತಿಳಿಸಿದರೂ ಸಂಬಂಧಿಸಿದ ಇಂಜಿನಿಯರ್‍ಗಳು ಸ್ಥಳಕ್ಕೆ ಆಗಮಿಸಿರುವುದಿಲ್ಲ. ಹಾಗೂ ಪಂಚಾಯಿತಿಗಳಲ್ಲಿ ಕಾಮಗಾರಿಗಳ ನಿರ್ವಹಣೆಯ ದಾಖಲೆಗಳನ್ನು ಸಹ ಸಮರ್ಪಕವಾಗಿಟ್ಟಿರುವುದಿಲ್ಲ. 15 ನೇ ಹಣಕಾಸು ಯೋಜನೆಯಡಿ ಖರೀದಿಸಿದ ವಸ್ತುಗಳ ಬಿಲ್ಲುಗಳಿರುವುದಿಲ್ಲ, ಆದರೆ ಪಾವತಿಯ ಹೆಸರು ಮಾತ್ರ ಇದೆ. ಇದನ್ನು ಗಮನಿಸಿದ ಕೇಂದ್ರ ಯೋಜನೆಗಳ ಉಸ್ತುವಾರಿ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಸದರು ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು, ಆಡಿಟ್ ನಡೆಸುವವರು ಸಹ ಕರಾರುವಕ್ಕಾಗಿ ಆಡಿಟ್ ನಡೆಸಬೇಕೆಂದು ತಿಳಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.


ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳನ್ನು ನಿರ್ಮಾಣ ಮಾಡಿದಾಗ ಐದು ವರ್ಷಗಳ ನಿರ್ವಹಣೆ ಮತ್ತು ಆರನೇ ವರ್ಷಕ್ಕೆ ಮರು ಡಾಂಬರೀಕರಣ ಮಾಡುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಇದನ್ನು ಅನುಷ್ಟಾನ ಮಾಡಿಸುವುದು ಇಂಜಿನಿಯರ್‍ಗಳ ಕೆಲಸವಾಗಿರುತ್ತದೆ. ಆದರೆ ಕೆಲವು ಕಡೆ ರಸ್ತೆ ನಿರ್ಮಾಣ ಮಾಡಿ ಒಂದೇ ವರ್ಷದಲ್ಲಿ ಹಾಳಾಗಿದ್ದು ಏಕಮುಖ ರಸ್ತೆಯಾಗಿರುವ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ. ರಸ್ತೆಯ ಪಕ್ಕದಲ್ಲಿಯೇ ವಿದ್ಯುತ್ ಕಂಬಗಳು ಹಾಗೂ ಮರಗಳನ್ನು ಬೆಳೆಸಿರುವುದರಿಂದ ಎರಡೂ ಕಡೆ ವಾಹನಗಳ ಸಂಚಾರ ಕಷ್ಟಕರವಾಗಿದೆ. ಒಂದು ವಾಹನ ಬರುವಾಗ ಎದುರು ಬರುವ ವಾಹನವನ್ನು ನಿಲ್ಲಿಸಿಕೊಳ್ಳಬೇಕಾಗಿದೆ ಎಂದು ಸದಸ್ಯರು ತಿಳಿಸಿದಾಗÀ ಇಂಜಿನಿಯರ್‍ಗಳು ರಸ್ತೆ ನಿರ್ಮಾಣ ಮಾಡುವಾಗಲೇ ಮಾನದಂಡದನ್ವಯ ರಸ್ತೆ ನಿರ್ಮಾಣ ಮಾಡಿ ಸಸಿಗಳ ನೆಡುವುದು ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಈಗಿರುವ ವಿದ್ಯುತ್ ಕಂಬಗಳನ್ನು 15 ದಿನಗಳಲ್ಲಿ ಸ್ಥಳಾಂತರಿಸಿ ವರದಿ ನೀಡಲು ಬೆಸ್ಕಾಂ ಹಾಗೂ ಯೋಜನಾ ವಿಭಾಗದ ಇಂಜಿನಿಯರ್‍ಗೆ ಸಂಸದರು ಸೂಚನೆ ನೀಡಿದರು.

ಮಾಹಿತಿ ಫಲಕ ಹಾಕಿ; ಸರ್ಕಾರಿ, ಖಾಸಗಿ ಎಲ್ಲಾ ನಿರ್ಮಾಣ ಕಾಮಗಾರಿಗಳಿಗೆ ಪರವಾನಗಿ ಪಡೆದುಕೊಳ್ಳಬೇಕು. ಹಾಗೂ ಕಾಮಗಾರಿಯ ಮಾಹಿತಿ ಫಲಕವನ್ನು ಅಳವಡಿಸದಿರುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದಾಗ ಎಲ್ಲಾ ಕಾಮಗಾರಿಗಳ ಮಾಹಿತಿ ಹಾಗೂ ನಿರ್ಮಾಣದ ಸಂಪೂರ್ಣ ಅಂಕಿಅಂಶಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಲು ಸೂಚನೆ ನೀಡಿದರು.

ಮೊಬೈಲ್ ಸ್ವೀಕರಿಸಲು ಸೂಚನೆ; ಹಾಸ್ಟೆಲ್‍ಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಧಾನ್ಯದ ದಾಸ್ತಾನು ಪರಿಶೀಲನೆ ವೇಳೆ ವಿವರ ಪಡೆಯಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮೊಬೈಲ್‍ಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಸಮಿತಿ ಸದಸ್ಯರಾದ ಮಂಜುನಾಥ್ ಹಾಗೂ ಇತರೆ ಸದಸ್ಯರು ಪ್ರಸ್ತಾಪಿಸಿದಾಗ ಲೋಕಸಭಾ ಸದಸ್ಯನಾಗಿ ಎಲ್ಲಾ ಕರೆಗಳನ್ನು ಸ್ವೀಕರಿಸುತ್ತೇನೆ, ಸಭೆಯಲ್ಲಿದ್ದಾಗ ಸ್ವೀಕರಿಸದ ಕರೆಗಳಿಗೆ ರಾತ್ರಿ ಎಲ್ಲಾ ಕರೆಗಳಿಗೆ ವಾಪಸ್ ಕರೆ ಮಾಡುತ್ತೇನೆ. ದಿನದಲ್ಲಿ ನೂರು, ಇನ್ನೂರು ಕರೆಗಳು ಬರಬಹುದು, ಎಲ್ಲಾ ಅಧಿಕಾರಿಗಳು ಮೊಬೈಲ್ ಕರೆಗಳನ್ನು ಸ್ವೀಕರಿಸಿ ಸೌಜನ್ಯಯುತವಾಗಿ ಸಾರ್ವಜನಿಕರೊಂದಿಗೆ ಮಾತನಾಡಿ ಇದ್ದ ಸ್ಥಿತಿಗತಿಗಳ ಬಗ್ಗೆ ತಿಳಿಸಬೇಕೆಂದು ಸೂಚನೆ ನೀಡಿದರು.

ಖಾತರಿ ಪ್ರಗತಿಯಲ್ಲಿ ಕುಂಠಿತ;  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಜುಲೈ ಅಂತ್ಯದವರೆಗೆ ಶೇ 38.53 ರಷ್ಟು ಮಾನವ ದಿನಗಳ ಪ್ರಗತಿಯಾಗಿದ್ದು 41.84 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಜಗಳೂರು ತಾಲ್ಲೂಕು ಬಯಲುಸೀಮೆಯಾಗಿದ್ದು ಇಲ್ಲಿ ಹೆಚ್ಚು ಖಾತರಿ ಕಾಮಗಾರಿಗಳು ನಡೆಯಬೇಕು. ಆದರೆ ಇಲ್ಲಿಯೇ ಪ್ರಗತಿ ಕುಂಠಿತವಾಗಿದೆ. ಜುಲೈನಲ್ಲಿ 47 ಸಾವಿರ ಮಾತ್ರ ಮಾನವ ದಿನಗಳ ಸೃಜನೆಯಾಗಿದೆ. ಆದರೆ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿರುವುದು ಹೊನ್ನಾಳಿ, ಚನ್ನಗಿರಿಯಲ್ಲಿ ಅಲ್ಲಿನ ಪ್ರಗತಿ ಹೆಚ್ಚಿದೆ. ಜುಲೈ ಅಂತ್ಯದವರೆಗೆ 7.21 ಲಕ್ಷ ಮಾನವ ದಿನಗಳ ಸೃಜನೆಯಾಗಿ 42.75 ಕೋಟಿ ವೆಚ್ಚ ಮಾಡಲಾಗಿದೆ.
ಅಡಿಕೆಗೆ ಪರ್ಯಾಯ ಬೆಳೆಗೆ ಒತ್ತು ನೀಡಿ; ಅಡಿಕೆಗೆ ಉತ್ತಮ ದರವಿರುವುದರಿಂದ ಎಲ್ಲಾ ಕಡೆ ಅಡಿಕೆ ಬೆಳೆಯಲಾಗುತ್ತಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಪೇರಲ, ಹಿಪ್ಪುನೇರಳೆ ಬೆಳೆಯಲು ಖಾತರಿಯಡಿ ಪ್ರೋತ್ಸಾಹಿಸಬೇಕೆಂದು ತಿಳಿಸಿ ಹರಿಹರ ತಾ; ದೀಟೂರು ಗ್ರಾಮದ ನವೀನ್ ಕುಮಾರ್ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಂದು ಖಾತರಿಯಡಿ ಸಹಾಯ ಪಡೆದು ತೈವಾನ್ ತಳಿಯ ಪೇರಲ ಬೆಳೆದು ಲಕ್ಷಗಟ್ಟಲೆ ಆದಾಯ ಪಡೆದಿದ್ದಾನೆ. ಅದೇ ರೀತಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಉತ್ಪಾದನೆ, ವೀಳ್ಯೆದೆಲೆ ಬೆಳೆಯನ್ನು ಬೆಳೆಯಬಹುದೆಂದು ತಿಳಿಸಿ ತೋಟಗಾರಿಕೆ ಇಲಾಖೆಯವರು ರೈತರಿಗೆ ತಾಂತ್ರಿಕ ಮಾಹಿತಿ ನೀಡಿ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹ ನೀಡಬೇಕೆಂದರು.

ಅನಿಲ ಹೆಚ್ಚುವರಿ ಶುಲ್ಕ ವಸೂಲಿ; ಗೃಹ ಬಳಕೆಯ ಸಿಲಿಂಡರ್‍ಗಳನ್ನು ಮನೆಗಳಿಗೆ ತಲುಪಿಸುವಾಗ ಸಿಲಿಂಡರ್ ದರವಲ್ಲದೆ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಚಿಗಟೇರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ ಹೆಚ್ಚಳಕ್ಕೆ ಸೂಚನೆ; ಚಿಗಟೇರಿ ಆಸ್ಪತ್ರೆ 930 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರೆಯಾಗಿದೆ. ಆದರೆ ಇದಕ್ಕೆ ಬೇಕಾದ ನಾನ್ ಕ್ಲಿನಿಕಲ್ ಸಿಬ್ಬಂದಿ ಸಂಖ್ಯೆ ಹೆಚ್ಚಿರುವುದಿಲ್ಲ ಎಂದು ಸಮಿತಿ ಸದಸ್ಯರು ಪ್ರಸ್ತಾಪಿಸಿ ಇದರಿಂದ ಗುಣಮಟ್ಟದ ಸೇವೆ ಕಷ್ಟಕರವಾಗಿದೆ ಎಂದಾಗ ಸಂಸದರು ಹಾಸಿಗೆ ಸಾಮಥ್ರ್ಯಕ್ಕೆ ತಕ್ಕಂತೆ ಸಿಬ್ಬಂದಿಗಳ ಹೆಚ್ಚಳವಾಗಬೇಕು ಹಾಗೂ ಇಲ್ಲಿನ ರೋಗಿಗಳಿಗೆ ಹೊರಗಡೆಯಿಂದ ಔಷಧಿ ಖರೀದಿಗೆ ಚೀಟಿ ಬರೆಯುತ್ತಿದ್ದಾರೆ ಎಂಬ ದೂರುಗಳು ಇದ್ದು ಸರ್ಜನ್‍ರವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿ ಇಲ್ಲಿಗೆ ಬೇಕಾಗುವ ಸಿಬ್ಬಂದಿಗಳ ವಿವರವನ್ನು ನೀಡಲು ತಿಳಿಸಿದರು.

ಸಭೆಯಲ್ಲಿ ಶಾಸಕರು ಹಾಗೂ ಡಾ;ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದÀ ಅಧ್ಯಕ್ಷರಾದ ಪ್ರೊ;ಎನ್.ಲಿಂಗಣ್ಣ, ಶಾಸಕರಾದ ಎಸ್.ಎ.ರವೀಂದ್ರನಾಥ್, ಮೇಯರ್ ಜಯಮ್ಮ ಗೋಪಿನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಎ.ಚನ್ನಪ್ಪ ಹಾಗೂ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!