ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಹಾರ ಧನದ ಚೆಕ್ ವಿತರಣೆ
ದಾವಣಗೆರೆ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಯುವ ರೈತನ ಕುಟುಂಬಕ್ಕೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಬೆಸ್ಕಾಂ ಇಲಾಖೆಯಿಂದ ಐದು ಲಕ್ಷ ರೂಪಾಯಿ ಮೌಲ್ಯದ ಪರಿಹಾರದ ಚೆಕ್ ಅನ್ನು ವಿತರಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ಬಿ.ಚಿತ್ತಾನಹಳ್ಳಿ ಗ್ರಾಮದ ಮಂಜಪ್ಪ ಅವರ ಮಗನಾದ ಬಸವರಾಜ್ (18 ವರ್ಷ) ಜಮೀನಿನಲ್ಲಿ ಕೃಷಿ ಪಂಪಸೆಟ್ ನಿಂದ ನೀರು ಹಾಯಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು.
ಸಚಿವರು ಮೃತರ ತಾಯಿ ಸೀತಮ್ಮ ಅವರಿಗೆ ಪರಿಹಾರದ ಚೆಕ್ ವಿತರಣೆ ಮಾಡಿ ಮೃತ ಯುವ ರೈತನ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದರು. ಜಮೀನುಗಳಲ್ಲಿ ಮುಂಜಾಗೃತಿ ವಹಿಸುವಂತೆ ಸಚಿವರು ರೈತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಬ್ಲಾಕ್ ವಿಭಾಗದ ಅಧ್ಯಕ್ಷ ಮಾಗನಹಳ್ಳಿ ಪರಶುರಾಮ್, ಮುಖಂಡರಾದ ಅಂಗಡಿ ರಾಮಣ್ಣ, ಕೆಂಚಪ್ಪ, ಯುವ ಮುಖಂಡ ಪರಶುರಾಮ್, ಕಲ್ಪನಹಳ್ಳಿ ಕೆ.ಸಿ ನಾಗರಾಜ್, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶಾಂತಮ್ಮ ಬಸವನಗೌಡಪ್ಪ, ಜೆ.ಸಿ.ಬಿ ಹನುಮಂತಪ್ಪ, ಹಳೆ ಬಾತಿ ಅಂಜಿನಪ್ಪ, ನಾಗರಕಟ್ಟೆ ಮಂಜು ಸೇರಿದಂತೆ ಬಿ. ಚಿತ್ತಾನಹಳ್ಳಿ ಗ್ರಾಮದ ಮುಖಂಡರುಗಳು, ಇತರರು ಇದ್ದರು.