ದಾವಣಗೆರೆಯ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ
ದಾವಣಗೆರೆ: ಇಲ್ಲಿನ ಚಾಮರಾಜ ಪೇಟೆಯಲ್ಲಿರುವ ಹಳೆಯ ಹೆರಿಗೆ ಆಸ್ಪತ್ರೆಗೆ ರಾಜ್ಯ ದಾವಣಗೆರೆ-ಚಿಗಟೇರಿ ಜಿಲ್ಲಾಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಟಿಂಕರ್ ಮಂಜಣ್ಣ ಹಾಗೂ ಜಿ.ಕಿಶೇರ್ ಭೇಟಿ ನೀಡಿ ಪರಿಶೀಲಿಸಿದರು.
10 ಕೋಟಿ ರೂ. ಯೋಜನೆಯ 50 ಬೆಡ್ ಆಸ್ಪತ್ರೆ ನವೀಕರಣಗೊಂಡಿರುವ ಕುರಿತು ಹಾಗೂ ಆಸ್ಪತ್ರೆಯ ಸ್ವಚ್ಛತೆ ಕುರಿತು ಸದಸ್ಯರು ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಿ.ಎಸ್. ಮಧು, ಮೆಟ್ರಿನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.