ದಾವಣಗೆರೆಯಲ್ಲಿ ಮೈ ಜುಂ ಎನ್ನಿಸುವ ಜಿಲ್ಲಾ ಖೋ-ಖೋ ಲೀಗ್ ಪಂದ್ಯಾವಳಿ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲೆ ಪ್ರಪ್ರಥಮ ಭಾರಿಗೆ ಖೋ-ಖೋ ಪಂದ್ಯಾವಳಿಯನ್ನು ಮ್ಯಾಟ್ ಮೇಲೆ ನಡೆಸಲಾಗಿದ್ದು ಖೋ-ಖೋ ಫ್ರೆಂಡ್ಸ್ ಗ್ರೂಪ್ ವತಿಯಿಂದ ನಿನ್ನೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪುರುಷರ ಖೋ-ಖೋ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಲಾಗಿತ್ತು.

ಶ್ರೀ ರವೀಂದ್ರ ಮಲ್ಲಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡಾಪಟುಗಳು ಮ್ಯಾಟ್ ಮೇಲೆ ಖೋ-ಖೋ ಆಡುವುದರಿಂದ ಕೈ ಕಾಲುಗಳು ತರಚುವುದಿಲ್ಲ ಮ್ಯಾಟ್ ಅಳವಡಿಸಿರುವುದು ರಕ್ಷಣೆ ಆಗಿದೆ. ರಾಜ್ಯ ಮತ್ತು ರಾಷ್ರ ಮಟ್ಟದಲ್ಲಿ ಆಡುವ ಅನುಭವ ಇಲ್ಲೆ ಸಿಗುವಂತಾಗುತ್ತದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಖೋ-ಖೋ ತರಬೇತಿ ನೆಡೆಯಲಿ ಎಂದು ಶ್ರೀ ರವೀಂದ್ರ ಮಲ್ಲಾಪುರ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ. ಸ್ಮಾಟ್ ಸಿಟಿ. ಇವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಸುಚೇತಾ ಎಂ ನೆಲವಗಿ. ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರು ಕೊರೋನಾ ದಿಂದ ಕ್ರೀಡಾ ಪಟುಗಳಿಗೆ ಪಂದ್ಯಾವಳಿಯನ್ನು ನೆಡೆಸಲಾಗಿರಲಿಲ್ಲ. ಕೊರೋನಾದ ನಂತರ ಇದು ಮೊದಲನೇ ಪಂದ್ಯಾವಳಿ ಆಗಿದ್ದು, ಕ್ರೀಡಾಪಟಗಳು ಮ್ಯಾಟ್ ಮೇಲೆ ಖೋ-ಖೋ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸತೀಶ್ ಎಂ, ಎಕ್ಸಿಕಿಟಿವ್ ಇಂಜೀನಿಯರ್ ಶ್ರೀ ಚಂದ್ರಶೇಖರ್ ಎಸ್.ಕೆ. ಜನರಲ್ ಮ್ಯಾನೇಜರ್. ಶ್ರೀ ಭರತ್‌ರಾಜ್, ಸಹಾಯಕ ಇಂಜೀನಿಯರ್ ಸ್ಮಾಟ್ ಸಿಟಿ. ಶ್ರೀ ಅರ್ಥರ್ ತ್ರಿಲೋಕ್‌ಸಿಂಗ್, ಶ್ರೀ ಹೇಮಂತ್ ಡಿ.ಎಸ್. ಸಿದ್ದಗಂಗಾ ಶಾಲೆ, ಶ್ರೀ ಜಿ.ಎಸ್.ಡಿ. ಮೂರ್ತಿ, ಅಧ್ಯಕ್ಷರು ದಾವಣಗೆರೆ ಜಿಲ್ಲಾ ಖೋ-ಖೋ ಸಂಸ್ಥೆ ಶ್ರೀಹನುಮಂತಪ್ಪ, ಶ್ರೀ ಶ್ರೀಶೈಲ ಎಸ್ ಇವರುಗಳು ಭಾಗವಹಿಸಿದ್ದರು.

ಖೋ-ಖೋ ಫ್ರೆಂಡ್ಸ್ ಗ್ರೂಪ್ ವತಿಯಿಂದ ಜಿಲ್ಲಾ ಮಟ್ಟದ ಪುರುಷರ ಖೋ-ಖೋ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಬಿ.ಎನ್. ರವಿಕುಮಾರ್ ಮಾಲೀಕತ್ವದ ನಂದಿಗ್ರೂಪ್, ದ್ವಿತೀಯ ಸ್ಥಾನವನ್ನು ಶ್ರೀ ಸೈಯದ್ ಬಾಷಾ ಮಾಲೀಕತ್ವದ ಮಾಸ್ರ‍್ಸ್, ದಾವಣಗೆರೆ, ತೃತೀಯ ಸ್ಥಾನವನ್ನು ಶ್ರೀ ಮರುಳಸಿದ್ದಪ್ಪ ಮಾಲೀಕತ್ವದ ಅಟ್ಯಾರ‍್ಸ್, ದಾವಣಗೆರೆ ಮತ್ತು ನಾಲ್ಕನೇ ಸ್ಥಾನವನ್ನು ಡಾ.ವೀರೇಂದ್ರ ಮಾಲೀಕತ್ವದ ಡೈಮಂಡ್ಸ್, ದಾವಣಗೆರೆ ಪಡೆದಿರುತ್ತಾರೆ. ಪಂದ್ಯಾವಳಿಯ ಉತ್ತಮ ಓಟಗಾರರಾಗಿ ಶ್ರೀ ವೀರೇಶ್, ಉತ್ತಮ ಹಿಡಿತಗಾರನಾಗಿ, ಶ್ರೀವೇಣುಗೋಪಾಲ್ ಎಸ್, ಸರ್ವತೋಮುಖ ಆಟಗಾರನಾಗಿ ಶ್ರೀ ಬಾಹುಬಲಿ ಎಸ್ ಬಿ ಹಾಗೂ ಉದಯೋನ್ಮುಖ ಆಟಗಾರನಾಗಿ ಶ್ರೀ ನಿಖಿಲ್ ಇವರು ಆಯ್ಕೆಯಾಗಿ ಪ್ರಶಸ್ತಿ ಪಡೆದಿರುತ್ತಾರೆ.

ಶ್ರೀ ಅರುಣ್ ಠಾಕೂರ್, ಶ್ರೀನಿವಾಸ್, ಶ್ರೀ ಪ್ರದೀಪ್ ಕುಮಾರ್, ಶ್ರೀ ಯು.ಜಿ. ಪಾಟೀಲ್, ಶ್ರೀ ಜಿ.ಎಸ್.ಡಿ. ಮೂರ್ತಿ, ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಶ್ರೀ ಎನ್.ಕೆ.ಕೊಟ್ರೇಶ್ ಮುಂತಾದವರು ಬಹುಮಾನ ವಿತರಣೆ ಸಮಾರಂಭವನ್ನು ನೆಡೆಸಿಕೊಟ್ಟರು. ಡಾ.ಚಂದ್ರಶೇಖರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಜೆ.ರಾಮಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಪರಶುರಾಮ್ ಪ್ರಾರ್ಥಿಸಿದರು, ಶ್ರೀ ಹೆಚ್.ಎಂ. ರಘು, ಸ್ವಾಗತಿದರು ಹಾಗೂ ಶ್ರೀ ಕೆ.ರವಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!