ದಿವಂಗತ ಶೆಡ್ಡಿ ಸಿದ್ದಪ್ಪ ಅವರ ಪತ್ನಿ ಶೆಡ್ಡಿ ಸಿದ್ದಮ್ಮ ನಿಧನ

ದಾವಣಗೆರೆ: ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದ ದಿವಂಗತ ಶೆಡ್ಡಿ ಸಿದ್ದಪ್ಪ ಅವರ ಪತ್ನಿ ಶೆಡ್ಡಿ ಸಿದ್ದಮ್ಮ (98) ಮಂಗಳವಾರ ಬೆಳಗಿನ ಜಾವ ನಿಧನ ಹೊಂದಿದರು.
ಮೃತರಿಗೆ ಪುತ್ರ ಶೆಡ್ಡಿ ಸಿದ್ದಪ್ಪ ಹಾಗೂ ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.