ಡಿಕೆಶಿ ನೋಡಲು ನೂಕುನುಗ್ಗಲು: ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿದ ಅಭಿಮಾನಿಗಳು
ದಾವಣಗೆರೆ: ಇಂದು ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಲಂಬಾಣಿ ಸಮುದಾಯದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಜನದಟ್ಟಣೆ ನಿಯಂತ್ರಿಸಲು ಸಂಘಟಕರ ಪರದಾಟ ನಡೆಸಬೇಕಾದ ಘಟನೆ ನಡೆಯಿತು.
ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಅಪೌಷ್ಟಿಕತೆ, ಮೂಲ ಸೌಕರ್ಯ, ವಲಸೆ ಕಾರ್ಮಿಕರ ಉದ್ಯೋಗ ಸೇರಿ ಇತರೆ ವಿಷಯಗಳ ಬಗ್ಗೆ ಡಿಕೆಶಿ ಸಂವಾದ ನಡೆಸಲು ಆಗಮಿಸಿದ್ದರು. ಈ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಜನರು ಡಿಕೆಶಿ ನೋಡಲು ಮುಗಿಬಿದ್ದರು.
ಜನರನ್ನು ನಿಯಂತ್ರಿಸಲು ಕಾರ್ಯಕ್ರಮ ಆಯೋಜಕರು ಹರಸಾಹಸ ಪಡಬೇಕಾದ ಸ್ಥಿತಿ ಉಂಟಾಯಿತು. ಕೋವಿಡ್ ಎರಡನೇ ಅಲೆ ಇದೀಗ ತಾನೆ ಕಡಿಮೆ ಆಗಿದ್ದು, ಜನರು ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೆ ಡಿಕೆಶಿ ನೋಡಲು, ಅವರಿಗೆ ಹಾರ ತುರಾಯಿ ಹಾಕಲು, ಅವರೊಂದಿಗೆ ಮಾತು-ಕತೆ ನಡೆಸಲು ಮುಗಿಬಿದ್ದು ಸರ್ಕಾರದ ನಿಯಮವನ್ನು ಬ್ರೇಕ್ ಮಾಡಿದ್ದು ಕಂಡುಬಂತು. ನೂಕುನುಗ್ಗಲು ನಿಯಂತ್ರಿಸಲು ಡಿ,ಕೆ. ಶಿವಕುಮಾರ್ ಮನವಿ ಮನವಿ ಮಾಡಿದರು.
ಇದೇ ವೇಳೆ ಹಾರ ತುರಾಯಿ ಹಾಕಲು ಬಂದ ಅಭಿಮಾನಿಗಳಿಗೆ ಹಾರ ಹಾಕುವುದು ಬೇಡ,ಹಾರಗಳನ್ನು ದೇವರಿಗೆ ಅರ್ಪಿಸುವಂತೆ ಡಿಕೆಶಿ ಮನವಿ ಮಾಡಿದರು.