ಡಿಕೆಶಿ ಬಳಿ ಇವೆ 110 ಸಿಡಿಗಳು, ಈ ಬಗ್ಗೆ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ: ಜಾರಕಿಹೊಳಿ

Dkeshi has 110 CDs, I have clear records of: Jarakiholi

ಬೆಳಗಾವಿ: ಡಿ.ಕೆ.ಶಿವಕುಮಾರ 110 ಸಿ.ಡಿ.ಗಳನ್ನು ಮಾಡಿಸಿದ್ದಾನೆ. ರಾಜ್ಯದ ಹಲವು ರಾಜಕಾರಣಿಗಳು, ಅಧಿಕಾರಿಗಳ ಬದುಕು ಹಾಳು ಮಾಡಲೆಂದೇ ಈ ಸಿ.ಡಿ.ಗಳನ್ನು ಮಾಡಿಸಲಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಕುರಿತ ಸ್ಪಷ್ಟ ದಾಖಲೆಗಳು ನನ್ನ ಬಳಿ ಇದ್ದು, ಇವೆಲ್ಲವನ್ನೂ ಸಿಬಿಐ ಅಧಿಕಾರಿಗಳಿಗೆ ನೀಡುತ್ತೇನೆ. ತಕ್ಷಣವೇ ಡಿಕೆಶಿ ಮತ್ತು ಅವನ ಗ್ಯಾಂಗ್‌ ಬಂಧನವಾಗಬೇಕು ಎಂದು ಅವರು ಹೇಳಿದ್ದಾರೆ.
ರಮೇಶ ಜಾರಕಿಹೊಳಿಯನ್ನು ಜೈಲಿಗೆ ಕಳಿಸಲು 40 ಕೋಟಿ ರೂ. ಖರ್ಚು ಮಾಡುತ್ತೇನೆ ಎಂದು ಈ ಮಹಾನಾಯಕ ಹೇಳಿದ ಆಡಿಯೊ ನನ್ನ ಬಳಿ ಇದೆ. ನನ್ನ ಹಾಗೂ ಯುವತಿಗೆ ಸಂಬಂಧಿಸಿದ ಸಿ.ಡಿ ಮಾಡಿಸಿದ್ದು ಇದೇ ಮಹಾನಾಯಕ. ಯಾರ್‍ಯಾರ ಜೀವನ ಹಾಳು ಮಾಡಲು ಏನೇನು ಮಾಡಿದ್ದಾನೆ ಎಂಬ ದಾಖಲೆಗಳೂ ಇವೆ ಎಂದು ಜಾರಕಿ ಹೊಳಿ ಹೇಳಿದರು.
ಡಿಕೆಶಿ ಮತ್ತು ನಾನು 1987ರಿಂದ ರಾಜಕೀಯ ಆರಂಭಿಸಿದ್ದೇವು. ಹರಕು ಚಪ್ಪಲಿ ಹಾಕಿಕೊಂಡು ಬಂದವನು ಭ್ರಷ್ಟಾಚಾರದ ಮೂಲಕ ಸಾವಿರಾರು ಕೋಟಿ ಹಣ ಮಾಡಿಕೊಂಡಿದ್ದಾನೆ. ದುಬೈನಲ್ಲಿ, ಲಂಡನ್‌ನಲ್ಲಿ ಮನೆ ಇದೆ, ಸಾವಿರಾರು ಕೋಟಿ ಹಣ ಇದೆ ಎಂದು ಅವನೇ ಹೇಳಿದ ಧ್ವನಿಮುದ್ರಣ ಕೂಡ ನನ್ನ ಬಳಿ ಇದೆ. ಅದನ್ನೂ ತನಿಖೆಗೆ ನೀಡುತ್ತೇನೆ ಎಂದರು.
ನನ್ನ ಸಿ.ಡಿ ಬರುವುದು ನನಗೆ ಮೂರು ತಿಂಗಳ ಮುಂಚೆಯೇ ಗೊತ್ತಿತ್ತು. ಅದನ್ನು ಇಟ್ಟುಕೊಂಡು ನನ್ನನ್ನು ‘ಬ್ಲ್ಯಾಕ್‌ಮೇಲ್‌’ ಮಾಡಿದರು. ದೊಡ್ಡ ಪ್ರಮಾಣದ ಆರ್ಥಿಕ ಅವ್ಯವಹಾರ ಮಾಡಲು ಯತ್ನಿಸಿದರು. ಆದರೆ, ನಾನು ಸರ್ಕಾರಕ್ಕೆ ಹಾನಿ ಮಾಡಲಿಲ್ಲ. ನನ್ನ ರಾಜಕೀಯ ಜೀವನಕ್ಕೆ ಹಾನಿ ಮಾಡಿಕೊಂಡೆ ಎಂದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!