ದಾವಣಗೆರೆ ಎಸಿಬಿ ಬಲೆಗೆ ಬಿದ್ದ ಫೀಲ್ಡ್ ಆಫಿಸರ್ ಯಾರು ಗೊತ್ತಾ.!

ದಾವಣಗೆರೆ: ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್ ಕೊರೆಸಿಕೊಡುವುದಕ್ಕೆ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿ ರವಾನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯೊಬ್ಬನಿಗೆ ದಾವಣಗೆರೆ ಎಸಿಬಿ ಅಧಿಕಾರಿಗಳು ತಮ್ಮ ಖೇಡ್ಡಾಕ್ಕೆ ಬೀಳಿಸಿಕೊಂಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಗೌರಿಹಳ್ಳಿ ಗ್ರಾಮದ ಗಜೇಂದ್ರ ಎಂಬ ವ್ಯಕ್ತಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್‌ಗಾಗಿ ಅರ್ಜಿ ಸಲ್ಲಿಸಿದ್ದು, ಈ ಯೋಜನೆಯಡಿ ಅನುಕೂಲ ಸಿಗಬೇಕಾದರೆ 10ಸಾವಿರ ರೂ ನೀಡಬೇಕು ಎಂದು ದೇವರಾಜ್ ಅರಸ್ ಅಭಿವೃದ್ದಿ ನಿಗಮದ ಫೀಲ್ಡ್ ಆಫೀಸರ್ ಸಿದ್ದಲಿಂಗ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇಂದು ಗಜೇಂದ್ರ ಅವರಿಂದ ಹಣ ಪಡೆಯುವ ವೇಳೆಗೆ ಸರಿಯಾಗಿ ದಾವಣಗೆರೆ ಎಸಿಬಿ ಅಧಿಕಾರಿಗಳು ರೈಡ್ ಮಾಡಿದ್ದು, ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ದೇವರಾಜ್ ಅರಸ್ ಅಭಿವೃದ್ದಿ ನಿಗಮದ ಫೀಲ್ಡ್ ಆಫೀಸರ್ ಸಿದ್ದಲಿಂಗ ಅವರೊಂದಿಗೆ ಡ್ರೈವರ್ ಮಹೇಶ್ ಅವರು ಸಿಕ್ಕಿಬಿದ್ದಿದ್ದಾರೆ.
garudavoice21@gmail.com 9740365719
