ಹಾಸನದಲ್ಲಿ ಹರಿದಾಡುತ್ತಿರುವ ಪೆನ್ ಡ್ರೈವ್ ವಿಡಿಯೋ ಬಗ್ಗೆ ಕೇಳಿದ್ರೆ ಕೈಮುಗಿದು ಏನು ಹೇಳಿದ್ರು ಗೊತ್ತಾ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ

ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿ ಏಪ್ರಿಲ್ 28 ಕ್ಕೆ ದಾವಣಗೆರೆಗೆ ಆಗಮಿಸಲಿದ್ದಾರೆ ಎಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಎರಡು ದಿನದಲ್ಲಿ ಐದು ಕಡೆ ಪ್ರಚಾರ ನಡೆಸಲಿದ್ದು, ಕಾರ್ಯಕರ್ತರು ಬೆಂಬಲಿಗರು ಸೇರಿದಂತೆ ಎರಡು ಲಕ್ಣ ಜನ ಸ್ವಯಂ ಪ್ರೇರಿತಾಗಿ ಸೇರಲಿದ್ದಾರೆ ಮೋದಿ ಭೇಟಿ ಮತದಾರರ ಮೇಲೆ ಪ್ರಭಾವ ಬೀರುತ್ತದೆ.ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂಬ ಭ್ರಮೆ ಇದೆ .

ನರೇಂದ್ರ ಮೋದಿ ಒಂದು ವ್ಯಕ್ತಿಯಲ್ಲ ಅದೊಂದು ಶಕ್ತಿ,ನರೇಂದ್ರ ಮೋದಿ‌ ಭೇಟಿ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಜಾಹಿರಾತುಗಳು ಜಾಸ್ತಿಯಾಗುತ್ತಿವೆ.ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಾಸ ಕುಸಿಯುತ್ತಿದೆ, ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಕಾಂಗ್ರೆಸ್ ನವರಿಗೆ ಜ್ಞಾನೋದಯವಾಗುತ್ತಿದೆ, ಕಂಗಾಲಾಗುತ್ತಿದ್ದಾರೆ

 

ಬಿಜೆಪಿ ಕಾರ್ತಕರ್ತರ ಉತ್ಸಾಹ ದಿನೇದಿನೇ ಹೆಚ್ಚಾಗುತ್ತಿದೆ.ಹಾಸನದಲ್ಲಿನ ಪೆನ್‌ಡ್ರೈವ್ ವೈರಲ್ ಸದ್ದಿನ ಬಗ್ಗೆ ಪ್ರಶ್ನೆಗೆ ಕೈಮುಗಿದು ಅದರ ಬಗ್ಗೆ ಏನು ಹೇಳಲು ಬಯಸುವುದಿಲ್ಲ ಎಂದ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ಏಪ್ರಿಲ್ 26 ರಂದು ನಡೆಯುವ 14 ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಮೈತ್ರಿ ನೇತೃತ್ವದಲ್ಲಿ ಎಲ್ಲಾ 14 ಕ್ಷೇತ್ರದಲ್ಲಿ ಗೆಲ್ಲುತ್ತೇವೆ.ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳಿಗೆ ಆಶೀರ್ವದಿಸಿ.

ದೇಶದ ಎಲ್ಲಾ ಹಿಂದುಳಿದ ವರ್ಗಗಳ ಆಸ್ತಿಗಳನ್ನು ಹಂಚುವ ವಿಷಯದಲ್ಲಿ ಸ್ಯಾಮ್ ಪಿತ್ರೊಡ ಮೂಲಕ ಹೇಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ.

ಅಮೆರಿಕದಲ್ಲಿ ಯಾವ ರೀತಿ ಹಂಚಿಕೆಯಾಗಿದೆ ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಆಗಬೆಕೆನ್ನುವುದು ಷಡ್ಯಂತ್ರ, ಪಿತೂರಿ, ಅಲ್ಪಸಂಖ್ಯಾತರ ಪುಷ್ಟೀಕರಣ ರಾಜಕಾರಣದ ಮುಂದಿನ ಹಂತವನ್ನು ಅವರ ಮೂಲಕ ಮಾತನಾಡಿಸುತ್ತಿದ್ದಾರೆ. ದೇಶ ರಾಜ್ಯ ಜನರು ಸೂಕ್ಷ್ಮ ರೀತಿಯಲ್ಲಿ ಮನಿಸಿದ್ದಾರೆ

ಗಾಂಧಿ ಕುಟುಂಬ, ರಾಹುಲ್ ಗಾಂಧಿ ಮನಸ್ಸಿನ ವಿಚಾರಗಳನ್ನು ಕಾಂಗ್ರೆಸ್ ಮುಖಂಡರ ಭಾವನೆಗಳನ್ನು ಈ ರೀತಿ ಹೇಳಿಸುತ್ತಿದ್ದಾರೆ

 

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಈ ವಿಚಾರ ಬೆಳಕಿಗೆ‌ ಬಂದಿರೋದು ಒಳ್ಳೆಯದು ,ಅವರನ್ನ ಖುಷಿಪಡಿಸಲು ಹೋಗಿ ಇತರ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ ಎಂದು ವಿಜಯೇಂದ್ರ ಹೇಳಿದರು

Leave a Reply

Your email address will not be published. Required fields are marked *

error: Content is protected !!