Doctorate: ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರಿಗೆ ಗೌ. ಡಾಕ್ಟರೇಟ್: ಘಟಿಕೋತ್ಸವಕ್ಕೆ ಮೂವರು ಮಾಣಿಕ್ಯ ರಿಗೆ ಆಹ್ವಾನ

ದಾವಣಗೆರೆ: (Doctorate) ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಪುರಸ್ಕೃತರಾದ ಕನಕಗುರುಪೀಠದ ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಮಾಜಿ ಸಚಿವರಾದ ಎಸ್.ಎ ರವೀಂದ್ರನಾಥ್ ಅವರುಗಳನ್ನು ದಾವಣಗೆರೆ ವಿವಿ ಕುಲಪತಿಗಳಾದ ಡಾ.ಬಿ.ಡಿ ಕುಂಬಾರ್ ಹಾಗೂ ರಿಜಿಸ್ಟ್ರಾರ್ ಶಶಿಧರ್ ರವರು ಭೇಟಿ ಮಾಡಿ ಘಟಿಕೋತ್ಸವ ಸಮಾರಂಭಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.ಶ್ರೀಗಳು ಹಾಗೂ ಮಾಜಿ ಸಚಿವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಈ ವೇಳೆ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ದಾವಣಗೆದೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಪ್ರಶಾಂತ್ ನುಚ್ಚಿನ್, ಪ್ರಶಾಂತ್ ಆರ್. ಟಿ, ದವನ್ ಕಾಲೇಜಿನ ಕಾರ್ಯದರ್ಶಿಗಳಾದ ವೀರೇಶ್ ಪಾಟೀಲ್. ಶ್ರೀನಿವಾಸ್ ನಂದಿಗಾವಿ, ಮಾಗಾನಹಳ್ಳಿ ಪರಶುರಾಮ್, ಬೂದಾಳ್ ಬಾಬು, ಪ್ರೊ. ಅಶೋಕ್ ಪಾಳೇದ್, ನವೀನ್ ಕಕ್ಕರಗೊಳ್ಳ, ಮಂಜುನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.