ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಕ್ಕೂ ಹೆಚ್ಚು ನಾಯಿಗಳಿಂದ ನಾಲ್ವರು ಮಕ್ಕಳು ಓರ್ವ ಪುರುಷನ ಮೇಲೆ ದಾಳಿ.!

ದಾವಣಗೆರೆ: ದಾವಣಗೆರೆ ಭಾಷ ನಗರದ 3 ನೇ ಕ್ರಾಸ್ ನಲ್ಲಿ ಗುರುುವಾರ ಸಂಜೆ 4 ರ ಸಮಯದಲ್ಲಿ ಮೊಹಮ್ಮದ್ ಅರ್ಶದ್ 7ವರ್ಷದ ಮಗುವಿನ ಮೇಲೆ 8 ರಿಂದ 10 ಬೀದಿ ನಾಯಿಗಳು ಮಾರಣಾಂತಿಕ ದಾಳಿ ನಡೆಸಿ ಕಣ್ಣು ಮುಖ ಹಾಗು ದೇಹದ ನಾನಾ ಭಾಗಗಳಿಗೆ ರಕ್ತ ಬರುವಂತೆ ಕಚ್ಚಿ ಗಾಯಮಾಡಿವೆ. ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎಸ್ ಎಸ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ. ಈ ಘಟನೆ ನಡೆದ 24 ಘಂಟೆಗಳ ಒಳಗೆ ನಗರದ ಅಖ್ಥರ್ ರಝಾ ಸರ್ಕಲ್, ರಿಂಗ್ ರಸ್ತೆಯಲ್ಲಿ, ಅಲ್ಲಭಕ್ಷಿ ಹಾಗು ಭಾಷನಗರ 1ನೇ ಕ್ರಾಸ್ ನಲ್ಲಿ ತನ್ವೀರ್ ಎಂಬ 5 ವರ್ಷದ ಮಗುವಿನ ಮೇಲೆ ದಾಳಿ ಮಾಡಿವೆ.
ನಾಯಿಗಳ ಹಾವಳಿಯಿಂದ ಬೇಸತ್ತ ಸಾರ್ವಜನಿಕರು ಮಹಾನಗರಪಾಲಿಕೆ ವಿರುದ್ದ ದೂರು ನೀಡಿದ್ದು, ಆಜಾದ್ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ದಾಳಿಗೊಳಗಾದ ಮಗು ಹಾಗು ವ್ಯಕ್ತಿಯ ಚಿಕಿತ್ಸೆಯ ವೆಚ್ಛವನ್ನು ಮಹಾನಗರಪಾಲಿಕೆ ಭರಿಸಬೇಕು ಹಾಗು ಬೀದಿ ನಾಯಿ, ಹಂದಿಗಳನ್ನು ಶಾಶ್ವತವಾಗಿ ನಿರ್ಮುಲನೆ ಮಾಡಬೇಕು ಎಂದು ಪ್ರತಿಭಟನೆ ನಡೆಸುತ್ತ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಮಹಾನಗರಪಾಲಿಕೆ ಆಯುಕ್ತರ ನಿರ್ಲಕ್ಷತೆಯ ಬಗ್ಗೆ ನೇರ ಅರ್ಜಿ (DTP) ಪ್ರಕರಣ ದಾಖಲಾಗಿರುತ್ತದೆ. ಪ್ರತಿಭಟನೆ ಸ್ಥಳಕ್ಕೆ ಮಹಾನಗರಪಾಲಿಕೆ ಆಯುಕ್ತರು ಆಗಮಿಸದೇ ಇರುವುದರಿಂದ ಆಕ್ರೋಶಗೊಂಡ ಧರಣಿನಿರತ ಸಾರ್ವಜನಿಕರು ಮಹಾನಗರಪಾಲಿಕೆ ವಿರುದ್ದ ಘೋಷಣೆಗಳನ್ನು ಕೊಗುತ್ತ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ನಗರದಲ್ಲಿ ಈ ಹಿಂದೆ ಇಂತಹ ಅನೇಕ ನಾಯಿಗಳು ಮಕ್ಕಳ ಮೇಲೆ ಮಾರಣಾಂತಿಕ ದಾಳಿ ಪ್ರಕರಣ ನಡೆದಿದ್ದರು ಪಾಲಿಕೆಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುರುವುದು ಯಾವ ಪುರುಷಾರ್ಥಕ್ಕೆ ಎಂದು ಗೊತ್ತಾಗುತ್ತಿಲ್ಲ. ಇಗಲಾದರು ಎಚ್ಚೆತ್ತುಕೊಂಡು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಜೆ ಡಿ ಸ್ ನ ದಕ್ಷಿಣ ವಿದಾನಸಭಾ ಅದ್ಯಕ್ಷರಾದ ಯು. ಎಂ. ಮನ್ಸೂರ್ ಅಲಿ, ರಾಜ್ಯ ಕಾರ್ಯದರ್ಶಿ T.ಅಸ್ಗರ್ ಆಗ್ರಹಿಸಿದರು. ನಾಸೀರ್ ಖಾನ್ SDPI ಜಿಲ್ಲಾ ಅದ್ಯಕ್ಷರಾದ ಇಸ್ಮಾಯಿಲ್ ನೂರ್ ಅಹಮದ್ ಹಾಗು ಸಾರ್ವಜನಿಕರು ಪ್ರತಿಭಟನೆ ನಡೆಸಿದರು