ಗುಟ್ಕಾ, ಸಾರಾಯಿ ಮಾರುವಂತವರು ಶಾಮನೂರು ಫ್ಯಾಮಿಲಿ ಬಗ್ಗೆ ಟೀಕೆ ಮಾಡುವ ಯಾವ ಅರ್ಹತೆ ಇಲ್ಲ – ಕಿಸಾನ್ ಕಾಂಗ್ರೆಸ್ ಪ್ರವೀಣ್ ಕುಮಾರ್

ದಾವಣಗೆರೆ : ದಾನ ಧರ್ಮ, ಸಮಾಜಸೇವೆಯಲ್ಲಿ ಹೆಸರಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ ನಿನ್ನೆ ಮಾದ್ಯಮದ ಮುಂದೆ ನೀಡಿರುವ ಹೇಳಿಕೆ ಪ್ರತಿಕ್ರಿಯೆ ನೀಡಿದ್ದು ಗುಟ್ಕಾ, ಸಾರಾಯಿ ಮಾರಾಟ ಮಾಡಿದವರು ದಾನ ಧರ್ಮ ಸಮಾಜ ಸೇವೆ ಸಲ್ಲಿಸುತ್ತಾ ಬಂದ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಅವರ ಕುಟುಂಬದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ಪ್ರಚಾರ ಪಡೆಯಲು ಯಶವಂತ ರಾವ್ ಜಾಧವ್ ಮುಂದಾಗಿದ್ದಾರೆ ಎಂದರು. ಪಕ್ಷದ ವರಿಷ್ಠರ ಓಲೈಕೆಗೆ ಈ ರೀತಿ ಹೇಳಿಕೆ ನೀಡುತ್ತಿದ್ದು ಒಗಳು ಭಂಟರಂತೆ ವರ್ತಿಸುತ್ತಿದ್ದಾರೆ ಇಂಥವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.
ಸದಾ ಸಂಸದರ ಹಿಂದೆ ಓಡಾಡುವ ಯಶವಂತ ರಾವ್ ಜಾಧವ್ ಗೆ ರಾಜಕೀಯದ ಹಿಂದೆ ಮುಂದೆ ಏನು ಎಂಬುದು ಗೊತ್ತಿಲ್ಲ. ಯಾರೋ ಬರೆದುಕೊಟ್ಟಿದ್ದನ್ನ ತಂದು ಮಾದ್ಯಮದ ಮುಂದೆ ಹೇಳಿಕೆ ನೀಡುತ್ತಾರೆ ವೈಯುಕ್ತಿಕವಾಗಿ ದಾವಣಗೆರೆ ಜನರಿಗೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು. ಚುನಾವಣೆಯಲ್ಲಿ ಸೋಲುಗಳನ್ನ ಉಂಡಿರುವ ಜಾಧವ್ ಇದೀಗ ಎಂ ಎಲ್ ಸಿ ಆಗಬೇಕೆಂದು ಕನಸು ಕಂಡಿದ್ದರು ಇದರಿಂದ ಬೇಸತ್ತು ಪಕ್ಷದ ನಾಯಕರನ್ನ ಮೆಚ್ಚಿಸಲು ಒಂದಲ್ಲಾ ಒಂದು ಹೇಳಿಕೆ ನೀಡುತ್ತಿದ್ದಾರೆ. ಶಾಮನೂರು ಕುಟುಂಬದ ರಾಜಕಾರಣ ಬಗ್ಗೆ ಮಾತನಾಡುವ ಮೊದಲು ತಮ್ಮ ಹಾಗೂ ಬಿಜೆಪಿ ನಾಯಕ ಹಿನ್ನೆಲೆ ಏನು ಎಂಬುದನ್ನ ತಿಳಿದುಕೊಳ್ಳಲಿ ಎಂದರು. ಇದೇರೀತಿ ಹೇಳಿಕೆ ನೀಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.