dowry; ವರದಕ್ಷಿಣೆ ಕಿರುಕುಳ: 05 ವರ್ಷದ ಮಗಳೊಂದಿಗೆ ಗೃಹಿಣಿ ಆತ್ಮಹತ್ಯೆ

Tired of dowry harassment, a mother and daughter committed suicide by jumping to Sulekere, a historical tourist spot near Kerebilachi in the taluk.

ಚನ್ನಗಿರಿ: ವರದಕ್ಷಿಣೆ dowry ಕಿರುಕುಳದಿಂದ ಬೇಸತ್ತ ತಾಯಿ ಹಾಗೂ ಮಗಳು ತಾಲೂಕಿನ ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣವಾದ ಸೂಳೆಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಯಿ ಕವಿತಾ (27) ಹಾಗೂ ಪುತ್ರಿ ನಿಹಾರಿಕಾ (05) ಮೃತ ದುರ್ದೈವಿಗಳು. ಪತ್ನಿ ಕವಿತಾ ಮತ್ತು ಮಗಳು ನಿಹಾರಿಕಾ ‌ಕಾಣೆಯಾಗಿದ್ದಾರೆ ಎಂದು ಪತಿ‌ ಮಂಜುನಾಥ ಶುಕ್ರವಾರ ಪೊಲೀಸರಿಗೆ ದೂರು‌ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದರು.

 

ಇಂದು (ಅ.16) ರಂದು ಸೂಳೆಕೆರೆಯಲ್ಲಿ ತಾಯಿ ಮತ್ತು ಮಗಳ ಶವ ಪತ್ತೆಯಾಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಎರೇಹಳ್ಳಿ ಗ್ರಾಮದ ಕವಿತಾ ಅವರು ಆರು ವರ್ಷದ ‌ಹಿಂದೆ ಹೊನ್ನೆಬಾಗಿ ಗ್ರಾಮದ ಮಂಜುನಾಥ ಎಂಬುವರನ್ನು ಮದುವೆ ಆಗಿದ್ದರು. ದಂಪತಿಗೆ ನಿಹಾರಿಕಾ ಎಂಬ ಮಗಳಿದ್ದಳು. ಪತಿ ಹಾಗೂ ಅವರ ಕುಟುಂಬಸ್ಥರು ಕಳೆದ ಕೆಲವು ವರ್ಷಗಳಿಂದ ವರದಕ್ಷಿಣೆ ಕಿರುಕಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಕವಿತಾ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!