ನೂತನ ಎಸ್ಪಿ ಆಗಿ ಡಾ. ಅರುಣ್ ಕೆ ಅಧಿಕಾರ ಸ್ವೀಕಾರ
ದಾವಣಗೆರೆ :ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಕೆ. ಅರುಣ್ ಅವರು ಸೋಮವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ನೂತನ ಎಸ್ಪಿ ಅರುಣ್ ಅವರು ಇಲ್ಲಿಯವರೆಗೂ ಚಿತ್ರದುರ್ಗ, ನೂತನ ಜಿಲ್ಲೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕಲಬುರಗಿಯಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದುವರೆಗೂ ಎಸ್ಪಿ ಆಗಿದ್ದ ಸಿ.ಬಿ. ರಿಷ್ಯಂತ್ ಅವರನ್ನು ಯಾವುದೇ ಸ್ಥಳ ನಿಯುಕ್ತಿಗೊಳಿಸದೆ ವರ್ಗಾಯಿಸಲಾಗಿತ್ತು.
ಈ ಬಗ್ಗೆ ಹೇಳಿಕೆ ನೀಡಿರುವ ರಿಷ್ಯಂತ್, ನನ್ನ ತುಂಬಾ ಹತ್ತಿರದ ಸಂಬಂಧಿಯೊಬ್ಬರ ಚುನಾವಣೆಗೆ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡುತ್ತಿದ್ದಾರೆ, ಚುನಾವಣಾ ಆಯೋಗಕ್ಕೆ ಈ ಬಗ್ಗೆ ನನ್ನ ಘೋಷಣಾ ಪತ್ರವನ್ನು ಸಲ್ಲಿಸಿರುತ್ತೇನೆ ಎಂದಿದ್ದಾರೆ.
ಚುನಾವಣಾ ಮಾರ್ಗಸೂಚಿಯ ಅನ್ವಯ ಘೋಷಣಾ ಪತ್ರ ಸಲ್ಲಿಸಿದವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಾಗುವಂತಿಲ್ಲ. ಹೀಗಾಗಿ ದಾವಣಗೆರೆಯಿಂದ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.