ಡಾ.ಪ್ರಭಾಕರ್ ಕೋರೆ ಕೊಆಪ್ ಸೊಸೈಟಿ ಆರನೇ ವಾರ್ಷಿಕೋತ್ಸವ
ದಾವಣಗೆರೆ: ಡಾ. ಪ್ರಭಾಕರ ಕೋರೆ ಕೋ ಆಪ್ ಸೊಸೈಟಿಯ ದಾವಣಗೆರೆ ಶಾಖೆ ಡಿ. 14ಕ್ಕೆ ಆರನೇ ವರ್ಷ ಪ್ರವೇಶಿಸಿದೆ ಎಂದು ಸೊಸೈಟಿ ಅಭಿವೃದ್ಧಿ ಅಧಿಕಾರಿ ಎಸ್.ಎಚ್. ಕಲ್ಲೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಾವಣಗೆರೆ ಶಾಖೆ 2017ರ ಡಿ. 14 ರಂದು ಆರಂಭವಾಗಿ ಇಂದಿಗೆ ಆರು ವರ್ಷವಾಗಿದೆ. ಆರು ವರ್ಷದ ಅವಧಿಯಲ್ಲಿ 63 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. 67 ಕೋಟಿ ವಿತರಿಸಲಾಗಿದೆ.
ಸದಸ್ಯರ ಠೇವಣಿಗಳಿಗೆ ಆಕರ್ಷಕ ಸಾಲ ಬಡ್ಡಿ ದರ ಒಂದು ವರ್ಷದ ಶೇ. 9, ಹಿರಿಯ ನಾಗರಿಕರಿಗೆ ಶೇ. 9.5, ರಿಕರಿಂಗ್ ರೇವಣಿಗೆ ಪ್ರತಿಶತ 8 ಬಡ್ಡಿದರ ಇರುತ್ತದೆ. ಭಾಗ್ಯಜ್ಯೋತಿ ಠೇವಣಿಯಲ್ಲಿ ಹೆಣ ತೊಡಗಿಸಿ 9 ವರ್ಷಕ್ಕೆ ದ್ವಿಗುಣ ಹಣ ಪಡೆಯುವ ಸವಲತ್ತು ಇದೆ ಎಂದು ತಿಳಿಸಿದರು. ಆರನೇ ವರ್ಷದ ಅಂಗವಾಗಿ ನ. 1 ರಿಂದ ಡಿ. 31 ರ ವರೆಗೆ ಇಡಲಾಗುವ ಠೇವಣಿ ಗೆ ವಿಶೇಷವಾಗಿ ಶೇ. 0.5 ಬಡ್ಡಿ ನೀಡಲಾ ಗುವುದು ಎಂದು ತಿಳಿಸಿದರು.
ಗ್ರಾಹಕರ ಅನುಕೂಲಕ್ಕೋಸ್ಕರ ವಾಹನಗಳ ವಿಮೆ ಮತ್ತು ಜೀವ ವಿಮೆ ಹಾಗೂ ಆರೋಗ್ಯ ವಿಮೆ ಸೌಲಭ್ಯವು ಇರುತ್ತದೆ ಹಾಗೂ ಲಾಕರ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಈಚೆಗೆ ಹೊರ ರಾಜ್ಯದಲ್ಲೂ ಶಾಖೆ ಪ್ರಾರಂಭಿಸಲು ಅನುಮತಿ ದೊರೆತಿದೆ. ಮಹಾರಾಷ್ಟ್ರದಲ್ಲಿ ನೂತನ ಶಾಖೆಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಎಸ್. ಎಸ್. ಹುರಿಕಡ್ಲಿ, ಕುಮಾರ್ ಚೌಗ್ಲೆ, ಬಿ.ಆರ್. ಮಂಜುನಾಥ್, ನಾಗರಾಜ್ ಉಪಸ್ಥಿತರಿದ್ದರು.