ಡಾ. ಸಂತೋಷ್ ಕುಮಾರ್ ರವರಿಗೆ ” ರಾಷ್ಟ್ರೀಯ ರತ್ನ ” ಪ್ರಶಸ್ತಿ

IMG-20220215-WA0004

 

ಮೈಸೂರು: ದಿನಾಂಕ 13-2-2022 ರಂದು ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನ(ರಿ) ಬೆಂಗಳೂರು ಹಾಗೂ ದಕ್ಷ ಪಿ ಯು ಕಾಲೇಜ್ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಮಸ್ತೆ ಸೈನಿಕರೆ ಹಾಗೂ ಶ್ರೀ ಮಾತಾ ವೈಷ್ಣೋ ದೇವಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಕುಮಾರ್ ರವರ ಆರೋಗ್ಯ ಇಲಾಖೆಯಲ್ಲಿನ ಮನೋವೈದ್ಯಕೀಯ ವಿಭಾಗದಲ್ಲಿನ ಸೇವೆಗಳನ್ನು ಮೆಚ್ಚಿ ಇವರಿಗೆ “ರಾಷ್ಟ್ರೀಯ ರತ್ನ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿದ್ದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ, ಶಾಂತವೀರ ಮಹಾಸ್ವಾಮೀಜಿ ಬೆಂಗಳೂರು ರವರು ಮತ್ತು ಉದ್ಘಾಟನೆಯನ್ನು ಡಾ, ಸಿ ಸೋಮಶೇಖರ್ ರವರು ನಿವೃತ್ತ ಐ ಎ ಎಸ್ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕರ್ನಾಟಕ ಗಡಿಪ್ರದೇಶ ಪ್ರಾಧಿಕಾರ ಕರ್ನಾಟಕ ಸರ್ಕಾರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಲನ ಚಿತ್ರ ನಿರ್ಮಾಪಕರು ಆದ ರಾಜ್ ಯಜಮಾನ್, ಮೈಸೂರಿನ ಖ್ಯಾತ ಸಾಹಿತಿಗಳಾದ ಶ್ರೀ ಸತೀಶ್ ಜವರೇಗೌಡ್ರು ಹಾಗೂ ಕುಮಾರಿ ತನುಷಾ ಖ್ಯಾತ ನೃತ್ಯಪಟು ಬಹುಭಾಷಾ ಚಲನಚಿತ್ರ ನಟಿ, ಮತ್ತು ಆತ್ಮ ಶ್ರೀ ಪ್ರತಿಷ್ಠನದ ಅಧ್ಯಕ್ಷರು ಆದ ಡಾ. ಗುಣವಂತ ಮಂಜು ರವರು ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!