ಡಾ. ಶಶಿಕಲಾ ಕೃಷ್ಣಮೂರ್ತಿ ಗೆ ಒಲಿದ ‘ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ’

ದಾವಣಗೆರೆ: ಐ.ಎಂ.ಎ ಕನ್ನಡ ಬರಹಗಾರರ ಸಮಿತಿ ರಾಜ್ಯ ಶಾಖೆಯಿಂದ ಕೊಡಮಾಡಲಾಗುವ ‘ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ’ಗೆ ಡಾ. ಶಶಿಕಲಾ ಕೃಷ್ಣಮೂರ್ತಿ ಭಾಜನರಾಗಿದ್ದಾರೆ.
೨೦೧೯-೨೦ ಹಾಗೂ ೨೦೨೦-೨೧ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ’ಗೆ ವೈದ್ಯ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದ್ದು, ೨೦೧೯-೨೦೨೦ ನೇ ಸಾಲಿಗೆ ಹೊನ್ನಾವರದ ಡಾ ಹೆಚ್.ಎಸ್ ಅನುಪಮ ಹಾಗು ಸಾಗರದ ಹೆಚ್.ಎಸ್ ಮೋಹನ್ ಮತ್ತು ೨೦೨೦-೨೧ ನೇ ಸಾಲಿಗೆ ದಾವಣಗೆರೆ ಎಸ್. ಎಸ್ ಆಸ್ಪತ್ರೆ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಲಾ ಪಿ.ಕೃಷ್ಣಮೂರ್ತಿ ಹಾಗು ಹುಬ್ಬಳ್ಳಿಯ ಡಾ. ವಿ.ಜಿ ಕುಲಕರ್ಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಐ.ಎಂ.ಎ ರಾಜ್ಯಾಧ್ಯಕ್ಷ ಡಾ. ವೆಂಕಟಾಚಲಪತಿ ಹಾಗು ಸಮಿತಿಯ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೈದ್ಯ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಬರುವ ಅಕ್ಟೋಬರ್ 3 ರಂದು ನಡೆಯಲಿರುವ ಐ.ಎಂ.ಎ ವೈದ್ಯ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.