drought prone; 161 ತೀವ್ರ ಬರಪೀಡಿತ, 34 ಸಾಧಾರಣ ಬರಪೀಡಿತ ತಾಲ್ಲೂಕು, ಘೋಷಣೆ
ಬೆಂಗಳೂರು, ಅ.13: ಪ್ರಸಕ್ತ ಸಾಲಿನಲ್ಲಿ ಮುಂಗಾರು ತಡವಾಗಿ ಆರಂಭವಾದ ನಿಟ್ಟಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ, 195 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು (drought prone) ತೀರ್ಮಾನಿಸಲಾಗಿದ್ದು, ಈ ತಾಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡ ನಂತರ 161 ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಪಟ್ಟಿ ಮಾಡುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ನೇಮಿಸಿ, ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ವಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿಗಳನ್ನು ಅನುಸರಿಸಿಕೊಂಡು ಸೆ.13 ರಂದು ನಡೆದ ಉಪಸಮಿತಿಯ ಸಭೆಯ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಮೇಲೆ ತಿಳಿಸಿರುವಂತೆ 161 ತಾಲೂಕುಗಳನ್ನು ತೀವ್ರ ಬರಪೀಡಿತವೆಂದು ಗುರುತಿಸಲಾಗಿದ್ದು, ಅವುಗಳನ್ನು ‘ಅನುಬಂಧ-1’ ಎಂದು, 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತವೆಂದು ಗುರುತಿಸಲಾಗಿದ್ದು ಅವುಗಳನ್ನು ‘ಅನುಬಂಧ-2’ ರಲ್ಲಿ ಪಟ್ಟಿ ಮಾಡಲಾಗಿದೆ. ಈ ಘೋಷಣೆಯು ಮುಂದಿನ ಆರು ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಸಂಬಂಧಪಟ್ಟ, ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರದಿಂದ ಕಾಲಕಾಲಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ (SDRF/NDRF) ನಿಯಮಗಳನ್ವಯ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶದಲ್ಲಿ ವಿವರಿಸಲಾಗಿದೆ.
drought; ರೈತರ ಜಮೀನಿನಲ್ಲಿ ಬರ ಅಧ್ಯಯನ ಅಧಿಕಾರಿಗಳಿಂದ ಬರ, ಬೆಳೆ ವೀಕ್ಷಣೆ
ತೀವ್ರ ಬರಪೀಡಿತ 161 ತಾಲ್ಲೂಕುಗಳ ಪಟ್ಟಿ ಇಂತಿದೆ:
ಬೆಂಗಳೂರು ನಗರ (ಬೆಂಗಳೂರು ಪೂರ್ವ), ಬೆಂಗಳೂರು ಗ್ರಾಮಾಂತರ ಜಿಲ್ಲೆ (ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ), ರಾಮನಗರ ಜಿಲ್ಲೆಯ (ಕನಕಪುರ, ರಾಮನಗರ, ಹಾರೋಹಳ್ಳಿ) ಚಿತ್ರದುರ್ಗ ಜಿಲ್ಲೆಯ (ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲಕೆರೆ, ಹೊಸದುರ್ಗ, ಮೊಳಕಾಲ್ಮೂರು), ದಾವಣಗೆರೆ ಜಿಲ್ಲೆಯ (ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು, ನ್ಯಾಮತಿ), ಮೈಸೂರು ಜಿಲ್ಲೆಯ (ಎಚ್. ಡಿ. ಕೋಟೆ, ಹುಣಸೂರು, ಮೈಸೂರು, ನಂಜನಗೂಡು, ಪಿರಿಯಾ ಪಟ್ಟಣ, ಟಿ. ನರಸೀಪುರ, ಸರಗೂರು, ಸಾಲಿಗ್ರಾಮ), ಮಂಡ್ಯ ಜಿಲ್ಲೆಯ (ಕೆ.ಆರ್ ಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡಪುರ, ಶ್ರೀರಂಗಪಟ್ಟಣ), ಬಳ್ಳಾರಿ ಜಿಲ್ಲೆಯ (ಬಳ್ಳಾರಿ, ಸಂಡೂರು, ಶಿರುಗುಪ್ಪ, ಕುರುಗೋಡು, ಕಂಪ್ಲಿ), ಕೊಪ್ಪಳ ಜಿಲ್ಲೆಯ (ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕರಟಗಿ, ಕುಕನೂರು, ಕನಕಗಿರಿ), ರಾಯಚೂರು ಜಿಲ್ಲೆಯ (ಲಿಂಗಸುಗೂರು, ಮಾನ್ವಿ, ರಾಯಚೂರು ಶಿರವಾರ).
ಸಾಧಾರಣ ಬರಪೀಡಿತ 34 ತಾಲ್ಲೂಕುಗಳ ಪಟ್ಟಿ ಇಂತಿದೆ:
ಬೆಂಗಳೂರು ನಗರ (ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಯಲಹಂಕ), ರಾಮನಗರ (ಚನ್ನಪಟ್ಟಣ, ಮಾಗಡಿ), ಕೋಲಾರ (ಮಾಲೂರು), ತುಮೂರು (ತುಮಕೂರು), ಚಾಮರಾಜನಗರ (ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು), ರಾಯಚೂರು (ದೇವದೂರ್ಗ, ಮಸ್ಕಿ), ಹಾಸನ (ಬೇಲೂರು, ಚೆನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ), ಚಿಕ್ಕಮಗಳೂರು (ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಕಳಸ), ಕೊಡಗು (ಸೋಮವಾರಪೇಟೆ), ದಕ್ಷಿಣ ಕನ್ನಡ (ಮಂಗಳೂರು, ಮೂಡಬಿದ್ರೆ), ಉಡುಪಿ (ಬ್ರಹ್ಮಾವರ), ಉತ್ತರ ಕನ್ನಡ (ಅಂಕೋಲ, ಭಟ್ಕಳ, ಕಾರವಾರ, ಕುಮಟ, ಜೋಯಿಡ/ಸೂಪ), ಯಾದಗಿರಿ (ಶೋರಾಪುರ)