ಶೆಳ್ಳೇಕ್ಯಾತ ಕುಟುಂಬಕ್ಕೆ ನಿವೇಶನ ನೀಡಲು ಡಿಎಸ್ಎಸ್ ಒತ್ತಾಯ
ದಾವಣಗೆರೆ: ಪರಿಶಿಷ್ಟ ಜಾತಿಯ (ಶಿಳ್ಳೇಕ್ಯಾತ) ಜನಾಂಗದದವರಿಗೆ ನಿವೇಶನ ಮಂಜೂರು ಮಾಡಿಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಹೊನ್ನಾಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ತೋಟಗಾರಿಕೆ ಇಲಾಖೆ ಹಿಂಭಾಗದ ದೇವನಾಯಕನಹಲ್ಳಿಯಲ್ಲಿ ಸುಮಾರು 30 ವರ್ಷಗಳಿಂದ ತಾತ್ಕಾಲಿಕ ಶೆಡ್‌ಗಳಲ್ಲಿ ಪರಿಶಿಷ್ಟ ಜಾತಿಯ (ಶಿಳ್ಳೇಕ್ಯಾತ) 80 ಕುಟುಂಬಗಳು ವಾಸಮಾಡುತ್ತಿವೆ.
ಹೊನ್ನಾಳಿ ಸುತ್ತ ಮತು್ತ ಅವರಿಗಾಗಿ ಸರ್ಕಾರಿ ಭೂಮಿ ಗುರುತಿಸಿ ಶೆಡ್‌ಗಳಲ್ಲಿ ವಾಸ ಮಾಡುವವರಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶೀಘ್ರ ಈ ಕುರಿತು ಕ್ರಮ ತೆಗೆದುಕೊಳ್ಳಲಿದ್ದರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಕುಂದುವಾಡ ಮಂಜುನಾಥ್ ಎಚ್ಚರಿಸಿದ್ದಾರೆ.