ಹಾವೇರಿಯಲ್ಲಿ ಡಿ ಎಸ್ ಎಸ್ ರಾಜ್ಯಸಮಿತಿ ಸದಸ್ಯ ಉಡಚಪ್ಪ ಮಾಳಗಿಯ ಸರಳ ಹುಟ್ಟು ಹಬ್ಬ ಆಚರಣೆ

ಹಾವೇರಿ: ನಗರದ ಪ್ರವಾಸಿ ಮಂದಿರದಲ್ಲಿ ಜ.೧ ಶನಿವಾರದಂದು ನಡೆದ ಜಿಲ್ಲಾ ಡಿ.ಎಸ್.ಎಸ್ ಪೂರ್ವಭಾವಿ ಸಭೆಯಲ್ಲಿ ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಅವರಿಗೆ ೫೦ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲೆಯ ವಿವಿಧ ತಾಲೂಕಿನಿಂದ ಹಾಗೂ ಗ್ರಾಮಗಳಿಂದ ಆಗಮಿಸಿದ್ದ ಡಿ.ಎಸ್.ಎಸ್ ಕಾರ್ಯಕರ್ತರು ಮಾದಿಗ ಸಮಾಜದ ಹಿರಿಯ ಮುಖಂಡ ಡಿ,ಎಸ್ ಮಾಳಗಿ ಅವರ ನೇತೃತ್ವದಲ್ಲಿ ೫೦ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶುಭ ಕೋರಿ ನಂತರ ಮಾತನಾಡಿದ ರಾಜ್ಯ ಹಿರಿಯ ಮುಖಂಡ ಡಿ.ಎಸ್ ಮಾಳಗಿ ಹುಟ್ಟು ಹಬ್ಬದ ಆಚರಣೆ ನಮ್ಮ ಜವಾಬ್ದಾರಿ ಹೆಚ್ಚುಸುತ್ತವೆ. ಹೊರತು ಇದು ಶೋಕಿಗಲ್ಲ. ಪತ್ರಿ ದಿನವೂ ನಮ್ಮ ಶೋಷಿತ ಜನರ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಉಡಚಪ್ಪ ಮಾಳಗಿ ಮಾತನಾಡಿ ನಿರಂತರವಾಗಿ ದಲಿತರ,ಜನಸಾಮಾನ್ಯರ ಹಾಗೂ ಹಿಂದುಳಿದ ವರ್ಗಗಳ ಜನರ ಪರವಾಗಿ ಕೆಲಸಗಳನ್ನು ಹಾಗೂ ಹೋರಾಟ ಮಾಡಲಾಗಿದೆ. ತಮ್ಮೆಲ್ಲರ ಸಹಕಾರದಿಂದ ಇನ್ನೂ ಹೆಚ್ಚು ಜನಪರ ಕೆಲಸ ಮಾಡಲು ಶ್ರಮವಹಿಸುತ್ತೇನೆ. ಎಲ್ಲರೂ ಹುಟ್ಟು ಹಬ್ಬಕ್ಕೆ ಶುಭ ಕೋರಿ ಪ್ರೋತ್ಸಾಹಿಸಿದ್ದೀರಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ನೂತನ ಗುತ್ತಲ ಪಟ್ಟಣ ಪಂಚಾಯತ ಸದಸ್ಯ ಎಸ್.ಜಿ. ಹೊನ್ನಪ್ಪನವರ, ಜಿಲ್ಲಾ ಡಿ.ಎಸ್.ಎಸ್ ಅಧ್ಯಕ್ಷ ಮಾಲತೇಶ ಯಲ್ಲಾಪೂರ, ಜಿಲ್ಲಾ ಸಂಘಟನೆ ಸಂಚಾಲಕ ಮಂಜಪ್ಪ ಮರೋಳ, ಜಿಲ್ಲಾಧ್ಯಕ್ಷ ಮಾರುತಿ ಕಿಳ್ಳಿಕ್ಯಾತರ, ಬಿ.ಎಸ್.ಪಿ ಜಿಲ್ಲಾಧ್ಯಕ್ಷರು ಅಶೋಕ ಮರೆಣ್ಣನವರ, ಕಟ್ಟಡ ಕಾರ್ಮಿಕರ ರಾಜ್ಯ ಪ್ರ. ಕಾರ್ಯದರ್ಶಿ ವಾಯ್,ಎಸ್ ಮಾಸೂರ, ಬೀಮಣ್ಣ ಯಲ್ಲಾಪೂರ, ನೀಲಪ್ಪ ದೊಡ್ಡಮರೆಮ್ಮನವರ, ಬಸವರಾಜ ಎಸ್,ಟಿ.ಡಿ, ನಾಗರತ್ನ ದಾರವಾಡಕರ, ರಾಜೇಶ್ವರಿ ಮುಂದಿನಮನಿ ಬಸಣ್ಣ ಮುಗಳಿ, ನಿಂಗಪ್ಪ ನಿಂಬಕ್ಕನವರ, ಗುಡ್ಡಪ್ಪ ಚಿಕ್ಕಪ್ಪನವರ, ಮಲ್ಲೇಶ ಕಡಕೋಳ, ಮಾಲತೇಶ ಕನ್ನಮ್ಮನವರ, ಶ್ರೀಕಾಂತ ಗಡ್ಡಿ, ಮಂಜು ದೊಡ್ಡಮರೆಮ್ಮನವರ, ಹನುಮಂತ ಹಾಂವಸಿ, ಕುತಬುದ್ದೀನ್ ದೇಸೂರ, ಶಿವರಾಜ ಹರಿಜನ, ವಿನೋದ ದಂಡೆಮ್ಮನವರ, ಮಲ್ಲಿಕಾರ್ಜುನ ಅಕ್ಕೂರ, ಪವನಕುಮಾರ ತಳವಾರ, ವಿನಾಯಕ ಬಡಿಗೇರ, ಕಾಳಪ್ಪ ಬಡಿಗೇರ, ಶಿವರಾಮ ಬಿದರಿ, ಸಂತೋಷ ಎಸ್.ಕೆ. ಹನುಮಂತಪ್ಪ ಹುಲ್ಲತ್ತಿ, ಮಂಜುನಾಥ ಶಿರಗುಪ್ಪಿ, ಮಂಜಪ್ಪ ದೊಡ್ಡಮನಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!