ರೇಣುಕಾಚಾರ್ಯ ಕಾರ್ಯ ವೈಖರಿಗೆ ದುಬೈ ಕನ್ನಡಿಗರು ಸಹ ಫಿದಾ
ದಾವಣಗೆರೆ: ಕರೋನಾದ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೋಂಕಿತರೊಂದಿಗೆ ಬೆರೆತು ಆತ್ಮಸ್ಥೈರ್ಯ ತುಂಬುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಕಾರ್ಯ ವೈಖರಿಯ ಬಗ್ಗೆ ದುಬೈ ಕನ್ನಡಿಗರು ಸಹ ಮೆಚ್ಚುಗೆ ಸುರಿಮಳೆ ಸುರಿಸಿದ್ದಾರೆ.
ದುಬೈ ದೇಶದ ಕನ್ನಡಿಗರ ಸಂಘದ ಅಧ್ಯಕ್ಷರಾದ ಶ್ರೀಮತಿ ಉಮಾ ವಿದ್ಯಾಧರ್ ಮತ್ತು ಪದಾಧಿಕಾರಿಗಳು ಶಾಸಕ ರೇಣುಕಾಚಾರ್ಯ ಅವರಿಗೆ.. ‘ನಿಮ್ಮಂತಹ ಶಾಸಕರು ಸಿಗುವುದು ವಿರಳ. ನಿಸ್ವಾರ್ಥ ಸೇವೆ ಮಾಡುತ್ತಿರುವ ನಿಮ್ಮ ಕಾರ್ಯ ಎಲ್ಲರಿಗೂ ಮಾದರಿಯಾಗಲಿ. ನಿಮ್ಮ ಕ್ಷೇತ್ರದ ಜನರು ಪುಣ್ಯವಂತರು. ನಿಮ್ಮ ಕುಟುಂಬ ವರ್ಗದವರು ಸಹ ಸೇವೆ ಮಾಡಲು ಕೈಜೋಡಿಸಿರುವುದು ಅಭಿನಂದನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರದ ಶಾಸಕರಾದ ರೇಣುಕಾಚಾರ್ಯ ಅವರ ಕಾರ್ಯವೈಖರಿಯನ್ನು ಗಮನಿಸಿ ಮೆಚ್ಚುಗೆಯ ಮಾತುಗಳನ್ನಾಡಿರುವುದಕ್ಕೆ ರೇಣುಕಾಚಾರ್ಯ ಅವರು ಧನ್ಯವಾದಗಳು ಧನ್ಯವಾದ ಸಲ್ಲಿಸಿದ್ದಾರೆ.