ದಾವಣಗೆರೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ 130 ನೇ ಜಯಂತಿ ಆಚರಣೆ

ದಾವಣಗೆರೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ 130 ನೇ ಜಯಂತಿ ಆಚರಣೆ
ದಾವಣಗೆರೆ: ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಜಯದೇವ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‍ರವರ 130 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಎನ್.ಹೆಚ್. ಹಾಲೇಶ್ ರವರು ಉದ್ಘಾಟಿಸಿದರು. ನಂತರ ಒಕ್ಕೂಟದ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು. ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪೂಜ್ಯ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ವಿ.ಅವಿನಾಶ್ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಕೆ.ಜಿ.ಯಲ್ಲಪ್ಪನವರು ಅಂಬೇಡ್ಕರ್ ಅವರು ನಡೆದ ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ರಾಜು ಎಸ್. ಮದಕರಿ, ಆರ್. ದೇವೇಂದ್ರಪ್ಪ ಆವರಗೆರೆ ಮಲ್ಲಿಕಾರ್ಜುನ್, ಮಂಜುನಾಯ್ಕ ಬಸಾಪುರ, ಮಾಲಾ ನಾಗರಾಜ್, ಶಾಂತಮ್ಮ, ಬಾಬುರಾವ್, ಕರಿಬಸಪ್ಪ, ಶಂಕರ್ ಎರೇಸೀಮೆ, ಮಂಜು ಕೆ.ಸಿ., ಮಾರುತಿ, ವಸಂತ, ಸಿಂಗ್ರಿಹಳ್ಳಿ ಶ್ರೀನಿವಾಸ, ಚಂದ್ರು ಗಣಪ, ಭೋಜರಾಜ್, ಮಂಜುನಾಥ ಕೆ., ಮಂಜುನಾಥ್ ಗೋಶಾಲೆ ಸುರೇಶ್, ಸೇರಿದಂತೆ ಇನ್ನಿತರರು ಹಾಜರಿದ್ದರು.