Dvg Police: ದಾವಣಗೆರೆ ಪೋಲೀಸರ ಭರ್ಜರಿ ಕಾರ್ಯಾಚರಣೆ: 5 ಜನ ಸರಗಳ್ಳತನದ ಆರೋಪಿಗಳ ಬಂಧನ: ಒಟ್ಟು 7 ಪ್ರಕರಣದಿಂದ 123 ಗ್ರಾಂ ವಶ

ದಾವಣಗೆರೆ: ಸರಗಳ್ಳತನ, ಸುಲಿಗೆ ಸೇರಿದಂತೆ ಒಟ್ಟು 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 123 ಗ್ರಾಂ ಬಂಗಾರ ವಶಕ್ಕೆ ಪಡೆದು 5 ಜನ ಆರೋಪಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೈಯದ್ ಮುಬಾರಕ್ (20), ನದೀಮ್ (22) ಬಂಧಿತರು. ಆರೋಪಿಗಳಿಂದ ಕಳುವು ಮಾಡಿದ್ದ ಮಾಂಗಲ್ಯ ಸರ ಮತ್ತು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಯುವಿಹಾರಕ್ಕೆ ಹೋದಾಗ ಮಾಂಗಲ್ಯ ಸರ ಕಳ್ಳತನ ಮಾಡಿರುವ ಈ ದುಷ್ಕರ್ಮಿಗಳ ವಿರುದ್ಧ ಚನ್ನಗಿರಿಯ ತಣಿಗೆರೆ ಗ್ರಾಮದ ಭಾಗ್ಯ ಹನುಂತಪ್ಪ ಅವರು ಕಳೆದ ಜೂ.28 ರಂದು ದೂರು ದಾಖಲಿಸಿದ್ದರು.

ಸಂತೇಬೆನ್ನೂರು ವೃತ್ತ ಸಿಪಿಐ ಮಹೇಶ್ ಇ.ಎಸ್. ಹಾಗೂ ಪಿ‌ ಎಸ್ ಐ ಮೇಟಿ ನೇತೃತ್ವದ ತಂಡ ಪ್ರಕರಣ ಆರೋಪಿತರನ್ನ ಪತ್ತೆ ಹಚ್ಚಿದ್ದು, ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಅಲ್ಲದೇ ಮಾಯಕೊಂಡ, ಚನ್ನಗಿರಿ ಜೋಲೀಸ್ ಠಾಣೆ ವ್ಯಾಪ್ತಿಯಲ್ಲಿಯು ಕೂಡ ಸುಲಿಗೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆರೋಪಿತರಿಂದ ಮಾಯಕೊಂಡ, ಚನ್ನಗಿರಿ ಠಾಣೆಯ ಇನ್ಸ್‌ಪೆಕ್ಟರ್ ಮಧು ತಂಡದಿಂದ ಪ್ರಕರಣಗಳು ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.

ಗಾಂಜಾ ಮಾರಾಟ‌ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹10 ಸಾವಿರ ಮೌಲ್ಯದ 860 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ನ್ನು ವಶಕ್ಕೆ ಪಡೆದಿದ್ದಾರೆ.

ಸೈಯದ್ ರಾಜಿಕ್ (28), ಫೈರೋಜ್ ಪಾಷ ತಂದೆ ಅಬ್ದುಲ್ ವಹಾಬ್ (28) ಬಂಧಿತರು.

ಚನ್ನಗಿರಿ ಠಾಣಾ ವ್ಯಾಪ್ತಿಯಲ್ಲಿ ಭದ್ರಾವತಿಗೆ ಹೋಗುವ ರಸ್ತೆಯಲ್ಲಿನ ಶ್ರೀ ತರಳಬಾಳು ಶಾಲೆಯ ಮುಂಭಾಗದ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು ಪಿ.ಜಿ ಅವರ ನೇತೃತ್ವದಲ್ಲಿ ಪಿಎಸ್‌ಐ ಜಗದೀಶ್ ಜಿ, ಸಿಬ್ಬಂದಿಗಳಾದ ಮಂಜುನಾಥ್ ಪ್ರಸಾದ್, ರಂಗಸ್ವಾಮಿ, ಸುರೇಶ್ ನಾಯ್ಕ ಹೆಚ್.ಆರ್., ಅಂಜಿನಪ್ಪ ಬಿ, ಹರೀಶ್ ಕುಮಾರ್ ಅವರನ್ನೊಳಗೊಂಡ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.

ಆರೋಪಗಳನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಎಸ್ ಪಿ ರಿಷ್ಯಂತ್ ಶ್ಲಾಘಿಸಿದರು.

Leave a Reply

Your email address will not be published. Required fields are marked *

error: Content is protected !!