ದಾವಣಗೆರೆ ತಹಸೀಲ್ದಾರ್ ಬಿಎನ್ ಗಿರೀಶ್ ಅವರಿಗೆ ಒಲಿದ, ರಾಜ್ಯ ಸರ್ಕಾರದ “ಸರ್ವೋತ್ತಮ ಸೇವಾ ಪ್ರಶಸ್ತಿ”

ದಾವಣಗೆರೆ: (ಏಪ್ರಿಲ್ 23) ರಾಜ್ಯ ಸರ್ಕಾರದ ವಿವಿಧಇಲಾಖೆಗಳಲ್ಲಿ 10 ಜನ ಅತ್ಯುನ್ನತ ಸೇವೆಗೈದ/ಸಾಧನೆಗೈದ ರಾಜ್ಯ ಸರ್ಕಾರಿ ಅಧಿಕಾರಿಗಳು/ನೌಕರರಿಗೆ “ಸರ್ವೋತ್ತಮ ಸೇವಾ ಪ್ರಶಸ್ತಿ’ ಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

2020-2021 ನೇ ಸಾಲಿನಲ್ಲಿ ದಾವಣಗೆರೆ ತಹಸೀಲ್ದಾರ್ ಬಿ ಎನ್ ಗಿರೀಶ್ ಅವರಿಗೆ ರಾಜ್ಯ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ”ಯನ್ನ ಸರ್ಕಾರ ಆದೇಶಿಸಿದೆ.

ಕೊವಿಡ್ ಎರಡನೇ ಅಲೆ ಸಂದರ್ಭದಲ್ಲಿ ತಹಸೀಲ್ದಾರ್ ಗಿರೀಶ್        ನಗರದಲ್ಲಿ ಜಾಗೃತಿ ಮೂಡಿಸುವ ಕೆಲಸದ ವೈಖರಿ.

ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆ ಹೇಗಿರುತ್ತೆ:
ಪ್ರತಿ ವರ್ಷವೂ ನೀಡುವ ಬಗ್ಗೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಜಿಲ್ಲಾವಾರು, ಇಲಾಖಾವಾರು ಮತ್ತು ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತು, ರಾಜ್ಯ ಇಲಾಖೆ ಮತ್ತು ಜಿಲ್ಲಾವಾರು
ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನವನ್ನು online ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆಯ್ಕೆ ಸಮಿತಿ ಸಭೆಯಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ online ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಶಿಫಾರಸ್ಸಿಗಾಗಿ ಕಳುಹಿಸಿಲಾಗಿತ್ತು. ಸದರಿ ಇಲಾಖಾ ಕಾರ್ಯದರ್ಶಿಗಳಿಂದ
ಅನುಮೋದಿತವಾಗಿ ಬಂದ ಅರ್ಜಿಗಳನ್ನು ಸಮಿತಿ ಸಭೆಯಲ್ಲಿ ಮಂಡಿಸಲಾಯಿತು. ಈ ಅಧಿಕಾರಿ/ನೌಕರರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ/ಲೋಕಾಯುಕ್ತ ತನಿಖೆ/ನ್ಯಾಯಾಂಗ ತನಿಖೆ/ಕ್ರಿಮಿನಲ್ ಮೊಕದ್ದಮೆ ಇವುಗಳು ಬಾಕಿ ಇರುವುದಿಲ್ಲವೆಂದು ಇಲಾಖಾ ವತಿಯಿಂದ ನೀಡಿದ ವರದಿಗಳನ್ನು ಆಯ್ಕೆ ಸಮಿತಿಯು ಗಮನಿಸಿದೆ.

ಪ್ರಶಸ್ತಿಗೆ ಮಾನದಂಡವೇನು:
ನಾಮನಿರ್ದೇಶನಗಳಲ್ಲಿ ಸಂಬಂಧಿಸಿದ ಅಧಿಕಾರಿ/ನೌಕರರು ಸಲ್ಲಿಸಿದ ವಿನೂತನ ಸೇವೆ, ನಾಗರೀಕರಿಗೆ ಅನುಕೂಲಕರವಾದ ಗುಣಾತ್ಮಕ ಸೇವೆ, ಸರ್ಕಾರದ ಯೋಜನೆಗಳನ್ನು ನಾಗರೀಕರಿಗೆ ತಲುಪಿಸುವಲ್ಲಿ ಶ್ರಮಿಸಿರುವ ಬಗ್ಗೆ ಇರುವ ವರದಿಯನ್ನು ಆಯ್ಕೆ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿತು. ಇವುಗಳಲ್ಲಿ ಅತ್ಯುತ್ತಮ ಹಾಗೂ ವಿನೂತನ ರೀತಿಯಲ್ಲಿ
ಕಾರ್ಯನಿರ್ವಹಿಸಿರುವ 10 ಅಧಿಕಾರಿ/ನೌಕರರನ್ನು 2020-21ನೇ ಸಾಲಿನ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸರ್ಕಾರದ ಆದೇಶವನ್ನು ಈ ಕೆಳಕಂಡಂತೆ ಹೂರಡಿಸಲಾಗಿದೆ.ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸಾಧನೆಗೈದ/ಸೇವೆಗೈದ ಕೆಳಕಂಡ ರಾಜ್ಯ ಸರ್ಕಾರದ ಅರ್ಹ 10 ಅಧಿಕಾರಿಗಳು/ನೌಕರರಿಗೆ 2020-21ನೇ ಸಾಲಿನ ರಾಜ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಪ್ರಶಸ್ತಿಯಲ್ಲಿ ಏನಿರುತ್ತೆ:
ಪ್ರತಿ ಪ್ರಶಸ್ತಿಯು ರೂ.25.000/- ರೂಪಾಯಿ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.

Leave a Reply

Your email address will not be published. Required fields are marked *

error: Content is protected !!