DYSP ನರಸಿಂಹ ತಾಮ್ರಧ್ವಜ ಸೇರಿದಂತೆ 45 ಡಿವೈಎಸ್ಪಿ ಗಳ ವರ್ಗಾವಣೆ ಮಾಡಿದ ಸರ್ಕಾರ

ದಾವಣಗೆರೆ: ಚುನಾವಣೆ ಹತ್ತಿರ ಬಂತೆದರೆ ಮೊದಲಿಗೆ ವರ್ಗಾವಣೆ ಪರ್ವ ಪ್ರಾರಂಭವಾಗುವುದು ಪೋಲಿಸ್ ಇಲಾಖೆಯಲ್ಲಿ. ಅದರಂತೆ ಪ್ರಥಮ ಭಾಗವಾಗಿ ರಾಜ್ಯದ 45 ಡಿವೈಎಸ್ಪಿ ಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅದರಲ್ಲಿ ದಾವಣಗೆರೆ ನಗರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರನ್ನ ಕೆಪಿಯ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ.
ಡಿವೈಎಸ್‌ಪಿ (ಸಿವಿಲ್) ರವರುಗಳನ್ನು ಅವರುಗಳ ಹೆಸರುಗಳ ಮುಂದೆ ತೋರಿಸಿರುವ ಸ್ಥಳಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿದೆ.ಸಂಬಂಧಪಟ್ಟ ಘಟಕಾಧಿಕಾರಿಗಳು, ಮೇಲ್ದಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವುದು ಹಾಗೂ ಸದರಿ ಅಧಿಕಾರಿಗಳು ಬಿಡುಗಡೆಗೊಂಡ ಮತ್ತು ವರದಿ ಮಾಡಿದ ಬಗ್ಗೆ ಈ ಕಛೇರಿಗೆ ಪಾಲನಾ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಡಿಜಿ ಮತ್ತು ಐಜಿಪಿ ರವರಿಂದ ಅನುಮೋದಿಸ ಡಿಜಿ ಐಜಿಪಿ ಪರವಾಗಿ ಉಮೇಶ್ ಕುಮಾರ್, ಐಪಿಎಸ್ ಆದೇಶಿಸಿದ್ದಾರೆ.