Eastern IGP: ಪೂರ್ವ ವಲಯದ ಐಜಿಪಿಯಾಗಿ ಡಾ ರವಿಕಾಂತೇಗೌಡ ನೇಮಕ; ಬಿ ರಮೇಶ್ ರವರನ್ನು ಬೆಂಗಳೂರಿಗೆ ವರ್ಗಾವಣೆ

ದಾವಣಗೆರೆ: (Eastern IGP) ಪೂರ್ವ ವಲಯ ಡಿಜಿ ಐಜಿಪಿಯಾಗಿ ಡಾ. ರವಿಕಾಂತೇಗೌಡ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಹಿಂದೆ ಪೂರ್ವ ವಲಯದ ಡಿಜಿ ಐಜಿಪಿ ಬಿ ರಮೇಶ್ ಅವರನ್ನು ಡಿ ಐ ಜಿ ಪಿ ಯಿಂದ ಐಜಿಪಿಗೆ ಉನ್ನತೀಕರಿಸಿದ ಹುದ್ದೆಯಾದ ಬೆಂಗಳೂರು ಪೂರ್ವ ಜಾಯಿಂಟ್ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಡಾ ರವಿಕಾಂತೇ ಗೌಡ ರವರು ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಐಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಬಿ ರಮೇಶ್ ಐಜಿಪಿಯಾಗಿ ದಾವಣಗೆರೆಗೆ ಪೂರ್ವ ವಲಯ ಐಜಿಪಿಯಾಗಿ ವರ್ಗಾವಣೆಯಾಗಿ ಬಂದಿದ್ದರು.
ಖಡಕ್ ಐಪಿಎಸ್ ಅಧಿಕಾರಿ ಎಂದೆ ಪ್ರಖ್ಯಾತಿಗಳಿಸಿರುವ ಡಾ. ರವಿಕಾಂತ್ ಗೌಡ ಅವರು ಪೂರ್ವ ವಲಯ ಐಜಿಪಿಯಾಗಿ ವರ್ಗಾವಣೆ ಆಗಿರುವುದರಿಂದ ಅಕ್ರಮ ದಂಧೆಕೋರರ ಎದೆಯಲ್ಲಿ ನಡುಕ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಪೂರ್ವ ವಲಯದಲ್ಲಿ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಮತ್ತು ಶಿವಮೊಗ್ಗ ಜಿಲ್ಲೆಗಳು ಸೇರಿವೆ.