EDEN PARK SCAM: ನಾಗರಿಕರ ಹಣ ದೋಚುವ ಮಾಫಿಯಾ.!? ಮುಖ್ಯ ಕಾರ್ಯದರ್ಶಿಗೆ ದೂರು

EDEN PARK SCAM: Mafia robbing citizens of money.!? Complaint to Chief Secretary

ನಾಗರಿಕರ ಹಣ

ಬೆಂಗಳೂರು: ರಾಜಧಾನಿ ಬೆಂಗಳೂರಿನ ರೆಸ್ಟೋರೆಂಟ್‌ಗಳಲ್ಲಿ ನಿಯಮ ಉಲ್ಲಂಘಿಸಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ನಾಗರಿಕರ ಆಕ್ರೋಶ ಸ್ಫೋಟಗೊಂಡಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಕಿಕೆಯಾಗಿರುವ ದೂರು ರಾಜ್ಯದ ಆಡಳಿತ ವ್ಯವಸ್ಥೆ ಹೇಗಿದೆ ಎಂಬುದನ್ನು ಅನಾವರಣ ಮಾಡಿದಂತಿದೆ.

ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಸರ್ಕಾರದ ಹಾಗೂ ನ್ಯಾಯಾಲಯಗಳ ಗಮನಸೆಳೆದು ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಇದೀಗ ಬೆಂಗಳೂರಿನ ಹೊಟೇಲ್‌, ರೆಸ್ಟೋರೆಂಟ್, ಮಳಿಗೆಗಳಲ್ಲಿ ಕುಡಿಯುವ ನೀರು ಮತ್ತಿತರ ಅಗತ್ಯ ವಸ್ತುಗಳಿಗೆ ಜನಸಾಮಾನ್ಯರಿಂದ ನಿಯಮ ಬಾಹಿರವಾಗಿ ಹಣ ವಸೂಲಿ ಮಾಡುತ್ತಿರುವ ಅಕ್ರಮಗಳ ಬಗ್ಗೆ ಆಕ್ರೋಶ ಹೊರಹಾಕಿದೆ. ತಪ್ಪಿತಸ್ಥ ಹೊಟೇಲ್ ರೆಸ್ಟೋರೆಂಟ್ ಮಳಿಗೆಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕು ಹಾಗೂ ನಾಗರೀಕರಿಗಾಗುತ್ತಿರುವ ಅನ್ಯಾಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ‘ಕೆ‌.ಎ.ಪಾಲ್ ನೇತೃತ್ವದ ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸಾಮಾಜಿಕ ಹೋರಾಟಗಾರ ಮೊಹಮ್ಮದ್ ರಫೀಕ್ ಅವರು ಡಿ.28ರಂದು ಬೆಂಗಳೂರಿನ ಕನ್ನಿಂಗ್ಹಾಮ್ ರಸ್ತೆಯಲ್ಲಿರುವ EDEN PARK RESTAURANT & BARಗೆ ಊಟಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಆ ರೆಸ್ಟೋರೆಂಟ್‌ನ ಕರ್ಮಕಾಂಡ ಅನಾವರಣವಾಗಿದೆ. ಕೆಲವು ವಸ್ತುಗಳಿಗೆ MRPಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಊಟದ ಬಿಲ್‌ನಲ್ಲಿ (Bill No:45737 Dated:28.01.2022 Time:15.33 – GSTN 29AAAFE3004E1Z2) ಒಟ್ಟು ಮೊತ್ತ ರೂ.8133 ಎಂದು ನಮೂದಿಸಿದ್ದರು. ಇದನ್ನು ಪರಿಶೀಲಿಸಿದಾಗ,
ಒಂದು ಲೀಟರ್ ಸ್ಮಾರ್ಟ್ ವಾಟರ್ ಬಿಲ್ ತಲಾ 55 ರೂ‌ಪಾಯಿಯಂತೆ ಎರಡು ಬಾಟಲಿ ನೀರಿಗೆ 110 ರೂಪಾಯಿ ನಮೂದಿಸಲಾಗಿದೆ. ಇದು ಎಂ‌ಆರ್‌ಪಿ ಕುರಿತ ನಿಯಮದ ಉಲ್ಕಂಘನೆಯಾಗಿದೆ.

ಗರಿಷ್ಟ ಮಾರಾಟ ದರ 40 ಎಂದು ಮುದ್ರಿಸಲ್ಪಟ್ಟಿರುವ SPRITE ಲಘು ಪಾನೀಯಗೆ 149 ರೂಪಾಯಿ ನಿಗದಿ ಮಾಡಿದ್ದಾರೆ. ಈ ಲಘುಪಾನೀಯಾದ ಟಿನ್‌ನಲ್ಲಿ ಗರಿಷ್ಠ ದರ 40 ರೂಪಾಯಿ ಎಂದು ಮುದ್ರಣಗೊಂಡಿದ್ದು ಅದರಲ್ಲಿ ಜಿಎಸ್‌ಟಿ ಕೂಡಾ ಸೇರಿರುತ್ತದೆ. ಅದಾಗಿಯೂ ಈ ರೆಸ್ಟೋರೆಂಟ್‌ನವರು ಅದಕ್ಕೆ 140 ರೂಪಾಯಿ ನಿಗದಿ ಪಡಿಸಿ ಮತ್ತೊಮ್ಮೆ GST ವಸೂಲಿ ಮಾಡಿದ್ದಾರೆ. ಈ ಮೂಲಕ ಮಲ್ಟಿಪಲ್ ಟ್ಯಾಕ್ಸ್ ಸಿಸ್ಟಮ್ ಅನ್ನು ಕಾನೂನು ಬಾಹಿರವಾಗಿ ಗ್ರಾಹಕರ ಮೇಲೆ ಹೇರಿರುತ್ತಾರೆ.

ಊಟದ ಬಿಲ್ ರೂ.7092ರ ಮೇಲೆ ಶೇ.10ರಷ್ಟು ಸೇವಾ ಶುಲ್ಕ (SERVICE CHRGE) ರೂ.709 ವಿಧಿಸಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ.

“Guidelines to prevent unfair trade practices and protection of consumer interest with regard to levy of services charge in hotels and restaurants”
ಕುರಿತು Central Consumer Authority (CCPA) ಗೊತ್ತುಮಾಡಿರುವ CONSUMER PROTECTION ACT 2019 ಪ್ರಕಾರ ಇದು ಅಪರಾಧವಾಗಿರುತ್ತದೆ ಎಂದಿರುವ ಮಹಮ್ಮದ್ ರಫೀಕ್ ಅವರು, ಈ ಸಂಬಂಧ ಸಿಟಿಜನ್ ರೈಟ್ಸ್ ಫೌಂಡೇಷನ್‌ಗೆ ದೂರು ನೀಡಿದ್ದಾರೆ. ಮಹಮ್ಮದ್ ರಫೀಕ್ ಅವರು ಈ ಹಿಂದೆ ಬೆಂಗಳೂರಿನ IMA ಹಾಗೂ ಆ್ಯಂಬಿಡೆಂಟ್ ಸಹಿತ ಹಲವಾರು ಪ್ರಕರಣಗಳ ದೂರುದಾರರಾಗಿದ್ದು, ಇವರ ದೂರನ್ನಾಧರಿಸಿ ಸೂಕ್ತ ತನಿಖೆ ನಡೆಸಬೇಕೆಂದು ಸಿಟಿಜನ್ ರೈಟ್ಸ್ ಫೌಂಡೇಷನ್ ರಾಜ್ಯ ಸರ್ಕರಕ್ಕೆ ಪತ್ರ ಬರೆದಿದೆ.

ಗ್ರಾಹಕರ ಕಾಯ್ದೆಯಂತೆ ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ವಿಧಿಸುವಂತಿಲ್ಲ. ಆದರೆ ಸದರಿ ರೆಸ್ಟೋರೆಂಟ್‌ನವರು ಸೇವಾ ಶುಲ್ಕ ವಿಧಿಸಿ ಅದರ ಮೇಲೆ ಮತ್ತೊಮ್ಮೆ ಜಿಎಸ್‌ಟಿ ವಸೂಲಿ ಮಾಡಿರುತ್ತಾರೆ. ಈ ಮೂಲಕ ಕೇಂದ್ರ-ರಾಜ್ಯ ಸರ್ಕಾರಗಳ ಹೆಸರಲ್ಲಿ ಅಕ್ರಮವಾಗಿ ಜಿಎಸ್‌ಟಿ ಸಂಗ್ರಹಿಸಿ ಸರ್ಕಾರದ ಬಗ್ಗೆ ಜನಸಾಮಾನ್ಯರಿಗೆ ಅಪನಂಬಿಕೆ ಮೂಡುವಂತೆ ಈ ರೆಸ್ಟೋರೆಂಟ್‌ನವರು ನಡೆದುಕೊಂಡಿದ್ದಾರೆ.


ಇದೇ ರೀತಿ ರಾಜ್ಯದ ಹೊಟೇಲ್, ರೆಸ್ಟೋರೆಂಟ್, ಮಳಿಗೆಗಳಲ್ಲಿ ಎಂಆರ್‌ಪಿ ನಿಯಮ ಉಲ್ಲಂಘಿಸಿ ಉಲ್ಲಂಘಿಸಿ ಕುಡಿಯುವ ನೀರು ಹಾಗೂ ಅಗತ್ಯ ವಸ್ತುಗಳಿಗೆ ದರ ವಸೂಲಿ ಮಾಡುತ್ತಿರುವ ಹಾಗೂ ಸೇವಾ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಪತ್ತೆಹಚ್ಚಬೇಕಿದೆ ಎಂದು ಸರ್ಕಾರದ ಗಮನ ಸೆಳೆದಿರುವ ‘ಸಿಟಿಜನ್ ರೈಟ್ಸ್’ ಗ್ರಾಹಕರ ಹಿಸಾಸಕ್ತಿಗೆ ವಿರುದ್ದವಾಗಿ, ಕಾನೂನು ಬಾಹಿರವಾಗಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ಸದರಿ ತಪ್ಪಿತಸ್ಥ ರೆಸ್ಟೋರೆಂಟ್ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಹಾಗೂ ಈ ವರೆಗೂ ಸದರಿ ರೆಸ್ಟೋರೆಂಟ್‌ನವರು ನಿಯಮ ಮೀರಿ ಸೇವಾ ಶುಲ್ಕ ಹಾಗೂ ಎಂಆರ್‌ಪಿಗಿಂತ ಹೆಚ್ಚಿನ ದರ ವಸೂಲಿ ಮಾಡಿರುವುದನ್ನು ಪತ್ತೆ ಹಚ್ಚಿ, ಅಕ್ರಮವಾಗಿ ಸಂಗ್ರಹಿಸಿರುವ ಒಟ್ಟು ಮೊತ್ತದ ಹಣವನ್ನು ಮುಟ್ಟುಗೋಲು ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಹೆಚ್ಚಿನ ಮಾಹಿತಿಗಾಗಿ:ಅಧ್ಯಕ್ಷರು ಸಿಟಿಜನ್ ರೈಟ್ಸ್ ಫೌಂಡೇಷನ್, ಬೆಂಗಳೂರು,919481147777

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!