ಚಾಮರಾಜ ಕ್ಷೇತ್ರದ ಶಾಲಾ ಕಾಲೇಜುಗಳ ಸ್ಥಿತಿ ಸರಿಪಡಿಸಲು ಶಿಕ್ಷಣ ತಜ್ಞರ ಕಮಿಟಿ ರಚಿಸಿ ಋಣ ತಿರಿಸೋಣ ಶಾಸಕ ಹರೀಶ್ ಗೌಡ

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಯುನಿಸೆಫ್ (UNICEF) ಹೈದ್ರಾಬಾದ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬದಲಾವಣೆಗಾಗಿ ಮಾಧ್ಯಮ ಎಂಬ ವಿಶೇಷ ಕಾರ್ಯಗಾರವನ್ನ ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕರು, ನಾನು ಕೂಡ ಇದೇ ವಿಶ್ವವಿದ್ಯಾಲಯದ ನೌಕರನಾಗಿರುವುದು ಹೆಮ್ಮೆ ತರುವಂತದ್ದು, ನಿಮ್ಮ ಕಾರ್ಯಕ್ರಮ ನನಗೆ ತುಂಬಾ ಹಿಡಿಸಿದೆ, ನಿಮ್ಮ ಜೊತೆ ನಾನೂ ಕೈ ಜೊಡಿಸುತ್ತೆನೆ ಎಂದರು, ಸರ್ಕಾರಿ ಶಾಲೆಗೆ ಹಲವಾರು ರೀತಿಯಲ್ಲಿ ಅನುದಾನ ಬರುತ್ತಿದೆ ಆದರೆ ಅದು ಎಲ್ಲಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಾಮರಾಜ ಕ್ಷೇತ್ರದಲ್ಲಿನ ಶಾಲೆಗಳ, ಕಾಲೇಜುಗಳ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ನೀಡಲು ಶಿಕ್ಷಣ ತಜ್ಞರ ಸಿವಿಸಿ ಕಮಿಟಿ ಮಾಡುತ್ತೆನೆ, ಇದರಿಂದ‌ನಾವು ಮೈಸೂರಿನ ಋಣ ತಿರಿಸಿದಂತಾಗುತ್ತೆ ಎಂದರು. ಅಲ್ಲದೆ ಯುನಿಸೆಫ್ ನಿಂದ ಆರ್ಥಿಕ ಸಹಕಾರ ನೀಡಿದ್ರೆ ಮೈಸೂರಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಬಹುದಾಗಿದೆ,

ಮೈಸೂರ ನಗರದಲ್ಲಿರುವ ವಿಜ್ಞಾನ ಭವನದಲ್ಲಿ ಜೂನ್ 22 ರಿಂದ 23 ರವರೆಗೆ ಎರಡು ದಿನಗಳ ಕಾಲ ಈ ಕಾರ್ಯಗಾರ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 30 ಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮಕ್ಕಳ ಶಿಕ್ಷಣ ಹಾಗೂ ಕೋವಿಡ್ ನಂತರದಲ್ಲಿ ಮಕ್ಕಳ ಚೇತರಿಕೆ ಬಗ್ಗೆ  ಶಿಕ್ಷಣ ತಜ್ಞ ಶೇಷಗಿರಿ ಪತ್ರಕರ್ತರಿಗೆ ವಿಶೇಷ ಕಾರ್ಯಗಾರ ನಡೆಸಿಕೊಟ್ಟರು. ಕರ್ನಾಟಕದ ಶಿಕ್ಷಣದ ಬಗ್ಗೆ ಸಂಪೂರ್ಣ ಅಂಕಿ ಅಂಶಗಳ ಮಾಹಿತಿ ನೀಡಿದ ಅವರು ಉಪಯುಕ್ತ ಮಾಹಿತಿಯನ್ನ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ  ಪ್ರಸೂನ್ ಸೇನ್, ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕಿ ಫ್ರೋ. ಸ್ವಪ್ಮ,  ಡಾ.ಮಮತಾ, ಡಾ.ರಾಕೇಶ್ ಸೇರಿದಂತೆ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ಹಾಗೂ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!