ಹಳೇ ಕುಂದುವಾಡ ಸರ್ಕಾರಿ ಪಿಯು ಕಾಲೇಜಿನ ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ
ದಾವಣಗೆರೆ: ಸರ್ಕಾರಿ ಶಾಲೆ ಅಥವಾ ಕಾಲೇಜು ಅಂದರೆ ಮೂಗು ಮುರಿಯೋ ಹೊತ್ತಲ್ಲಿ ದಾವಣಗೆರೆ ನಗರದ ಹಳೇ ಕುಂದುವಾಡ ಪದವಿ ಪೂರ್ವ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದು, ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದುವ ಮೂಲಕ ಮಾದರಿಯಾಗಿ ಖಾಸಗಿ ಕಾಲೇಜಿಗೆ ಸೆಡ್ಡು ಹೊಡೆದಿದ್ದಾರೆ.
ದಾವಣಗೆರೆ ನಗರದ ಹಳೇ ಕುಂದುವಾಡ ಪಿಯುಸಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಪಡೆದಿದ್ದು, ಕಲಾ ವಿಭಾಗದಲ್ಲಿ ಶೇ. 78.57 ಫಲಿತಾಂಶ ಪಡೆದಿದ್ದು 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದರೆ, 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ, 4 ದ್ವಿತೀಯ ದರ್ಜೆ, ನಾಲ್ವರು ತೃತೀಯ ದರ್ಜೆಯಲ್ಲಿ ಪಾಸ್ ಆಗಿದ್ದಾರೆ.
ಬಡತನದಲ್ಲಿ ಬೆಳೆದ ಬಿಎನ್ ಸಾನಿಕ 575 ಅಂಕ ಪಡೆಯುವ ಮೂಲಕ ಕಾಲೇಜಿಗೆ ಟಾಪರ್ ಆಗಿದ್ದಾಳೆ, ಬಿಎಸ್ ಜ್ಯೋತಿ 566, ಆರ್ ಗೌತಮಿ 554, ಎಂ. ದೇವಿಕಾ 544, ಆರ್ ಶಬಾನ 540, ಆರ್ ಜಯಲಕ್ಷ್ಮಿ 535, ಜಿ. ಬೆಳಕೇರಪ್ಪ 528, ಎ ಲಕ್ಷ್ಮಿ 515, ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದರೆ, ಎಸ್. ಮಾನ್ಯ 508 ಅಂಕ ಪಡೆದಿದ್ದು ಕೇವಲ ಎರಡು ಅಂಕಗಳಲ್ಲಿ ಡಿಸ್ಟಿಂಕ್ಷನ್ ತಪ್ಪಿದೆ, ಇನ್ನೂ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಕಾಲೇಜು ಅಭಿವೃದ್ದಿ ಸಮಿತಿ, ಮನಾ ಯುವ ಬ್ರಿಗೇಡ್, ಜರವೇ ಸೇರಿದಂತೆ ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.