ಎಲೆಬೇತೂರು ಜೋಡಿ ಕೊಲೆ ರಹಸ್ಯ ಭೇದಿಸಿದ ದಾವಣಗೆರೆ ಪೋಲೀಸ್.! ಮೂವರ ಬಂಧನ, ನಗದು, ಚಿನ್ನಾಭರಣ ವಶ

ದಾವಣಗೆರೆ: ಎಲೆಬೇತೂರು ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, ಅವರಿಂದ ನಗದು ಹಾಗೂ ಬಂಗಾರ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕೊಲೆ ಪ್ರಕರಣದ ಆರೋಪಿಗಳ ಮಾಹಿತಿ ನೀಡಿದ ಅವರು, ಕಳೆದ ಜನವರಿ 24ರಂದು ರಾತ್ರಿ ಎಲೆಬೇತೂರು ಗ್ರಾಮದಲ್ಲಿ ಹಿರಿಯ ನಾಗರೀಕರಾದ ಗುರುಸಿದ್ದಯ್ಯ ಮತ್ತು ಸರೋಜಮ್ಮರನ್ನು ಯಾರೋ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಮನೆಯಲ್ಲಿದ್ದ ನಗದು ಮತ್ತು ಬಂಗಾರವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಜೋಡಿ ಕೊಲೆ ಪ್ರಕರಣವು ದಾವಣಗೆರೆ ಜಿಲ್ಲೆಯ ಸಾರ್ವಜನಿಕ ವಲದಯಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದ ತನಿಖೆ ನಡೆಸಲು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು.

ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಜಿಲ್ಲಾ ರಕ್ಷಣಧಿಕಾರಿ ರಾಮಗೊಂಡ ಬಸರಗಿ, ಪ್ರೊಬೇಷನರಿ ಐಪಿಎಸ್ ಹೆಚ್.ಎನ್.ಮಿಥುನ್, ಜಿಲ್ಲಾ ಅಪರಾಧ ದಾಖಲೆಗಳ ಘಟಕದ ಆರಕ್ಷಕ ಉಪಾಧೀಕ್ಷ ಬಿ.ಎಸ್.ಬಸವರಾಜ್,

ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಲಿಂಗನಗೌಡ ನೆಗಳೂರು, ಪಿಎಸ್‍ಐ ಲಕ್ಷ್ಮಣ್, ಡಿಸಿಆರ್‍ಬಿ ಎಎಸ್‍ಐ ಎಂ.ಆಂಜನಪ್ಪ ಸಿಬ್ಬಂದಿಗಳಾದ ಕೆ.ಸಿ.ಮಜೀದ್, ಕೆ.ಟಿ.ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್‍ನಾಯ್ಕ್, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜನಗೌಡ, ದೇವೇಂದ್ರ ನಾಯ್ಕ, ಮಹೇಶ್, ರಾಜು ಲಂಬಾಣಿ, ಷಣ್ಮುಖ, ಮಂಜುನಾಥ, ನಾಗರಾಜಯ್ಯ, ಅಣ್ಣಪ್ಪ, ರಾಘವೇಂದ್ರ, ಉಮೇಶ್ ಬಿಸ್ನಾಳ, ಶಾಂತರಾಜ್, ಬಸವರಾಜ್, ನಿಂಗರಾಜ್, ನೂರುಲ್ಲಾ ಷರೀಫ್, ನೂರುಲ್ಲಾ ಇವರ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಜೋಡಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮನೆಯಿಂದ ದೋಚಿಕೊಂಡು ಹೋಗಿದ್ದ 1.75ಲಕ್ಷ ನಗದು, 188 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು 9.27 ಲಕ್ಷ ಮೂಲ್ಯದ ಬಂಗಾರ, ನಗದು ಜತೆ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಧಿಕಾರಿ ರಾಮಗೊಂಡ ಬಸರಗಿ, ಪ್ರೊಬೇಷನರಿ ಐಪಿಎಸ್ ಹೆಚ್.ಎನ್.ಮಿಥುನ್, ಜಿಲ್ಲಾ ಅಪರಾಧ ದಾಖಲೆಗಳ ಘಟಕದ ಆರಕ್ಷಕ ಉಪಾಧೀಕ್ಷ ಬಿ.ಎಸ್.ಬಸವರಾಜ್,

ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಲಿಂಗನಗೌಡ ನೆಗಳೂರು, ಪಿಎಸ್‍ಐ ಲಕ್ಷ್ಮಣ್, ಡಿಸಿಆರ್‍ಬಿ ಎಎಸ್‍ಐ ಎಂ.ಆಂಜನಪ್ಪ ಸೇರಿದಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳು ಇದ್ದರು.

 

Leave a Reply

Your email address will not be published. Required fields are marked *

error: Content is protected !!