ದಾವಣಗೆರೆಯಲ್ಲಿ 20 ಲಕ್ಷ ಮೌಲ್ಯದ ಕುಕ್ಕರ್ ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು
ದಾವಣಗೆರೆ: ತಾಲೂಕಿನ ಚಿಕ್ಕಬೂದಿಹಾಳ್ ಗ್ರಾಮದ ಗೋದಾಮು ಒಂದರಲ್ಲಿ ಇರಿಸಿದ್ದ ₹20 ಲಕ್ಷ ಮೌಲ್ಯದ 2067 ಕುಕ್ಕರ್‌ಗಳನ್ನು ಎಫ್‌ಎಸ್‌ಟಿ ತಂಡ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಸಂಜೆ ವಶಪಡಿಸಿಕೊಂಡಿದೆ.
ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ತಂಡವು ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 124 ಪೆಟ್ಟಿಗೆಗಳಲ್ಲಿದ್ದ ಕುಕ್ಕರ್‌ಗಳನ್ನು ಇರಿಸಲಾಗಿತ್ತು. ಅದರ ಮೇಲೆ ಯಾವುದೇ ಪಕ್ಷದ ಲೇಬಲ್ ಅಂಟಿಸಲಾಗಿಲ್ಲ. ಯಾರಿಗೆ ಸೇರಿದ್ದು ಎಂಬುದು ಖಚಿತವಾಗಿಲ್ಲ ಎನ್ನಲಾಗಿದೆ.
‘ಮಿಲ್ ಮಾಲೀಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಕುಕ್ಕರ್ ಯಾರಿಗೆ ಸೇರಿದ್ದವು ಎಂಬುದು ತಿಳಿದುಬಂದಿಲ್ಲ. ಮಿಲ್ ಮಾಲಿಕರ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗುತ್ತಿದೆ. ಎಲ್ಲ ಕುಕ್ಕರ್‌ಗಳನ್ನು ಎಪಿಎಂಸಿಯಲ್ಲಿ ಇರಿಸಲಾಗಿದೆ’ ಎಂದು ದಾವಣಗೆರೆ ಉತ್ತರ ಚುನಾವಣಾಧಿಕಾರಿ ಕೆ.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.