ವಿದ್ಯುತ್ ಅವಘಡ: ದಂಪತಿ ಸಜೀವ ದಹನ

ಯಾದಗಿರಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ದಂಪತಿ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ಕೆ.ಬಿ.ರಾಘವೇಂದ್ರ (39), ಶಿಲ್ಪಾ ರಾಘವೇಂದ್ರ (32) ಮೃತ ದಂಪತಿಗಳಾಗಿದ್ದಾರೆ.
ಬಟ್ಟೆ ಅಂಗಡಿ ವ್ಯಾಪಾರಿಗಳಾಗಿದ್ದ ಇವರು ಮನೆಯ ಮೂರು ಮಹಡಿಗಳ ಪೈಕಿ ಎರಡರಲ್ಲಿ ಬಟ್ಟೆ ವ್ಯಾಪಾರ, ಒಂದರಲ್ಲಿ ವಾಸವಿದ್ದರು. ಎಂದಿನಂತೆ ವ್ಯವಹಾರ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದಾಗ ಭಾನುವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಸೋಮವಾರ ಬೆಳಗಿನ ಜಾವ 5 ಗಂಟೆಗೆ ಸಾರ್ವಜನಿಕರು ಗಮನಿಸಿದ್ದಾರೆ. ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.