ನಮ್ಮ ಜನ್ಮ ದಿನಕ್ಕೆ ಕೊವಿಡ್ ಬಗ್ಗೆ ಜಾಗೃತಿ ಮೂಡಿಸಿ, ನಿಮ್ಮ ಆರೋಗ್ಯವನ್ನು ಉಡುಗೊರೆಯಾಗಿ ನೀಡಿ: ವಚನಾನಂದ ಶ್ರೀಗಳಿಂದ ಮನವಿ

ದಾವಣಗೆರೆ: ಕೋವಿಡ್ ಮಹಾಮಾರಿ ನಮ್ಮ, ನಿಮ್ಮೆಲ್ಲರ ಆತ್ಮೀಯರ ಜೀವ ತಗೆಯುವಂತಹ ಕೆಲಸ ಮಾಡುತ್ತಿದೆ. ಈ ಮಹಾಮಾರಿಯ ಹಡೆಮುರಿಯನ್ನು ಕಟ್ಟಲು ಬೇಕಾಗಿರುವುದು ಪ್ರಮುಖವಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧಾರಣೆ.
ಈ ಮಧ್ಯೆ ಮತ್ತೆ ನಮ್ಮ ಜನ್ಮದಿನ (ಏಪ್ರಿಲ್ 24) ಹತ್ತಿರ ಬಂದಿದೆ. ಕರೋನಾ ಮಹಾಮಾರಿಯ ತಾಂಡವವನ್ನು ಮಟ್ಟ ಹಾಕಲು ನಾವು ದೈಹಿಕ ಅಂತರ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಈ ಬಾರಿ ನಮ್ಮ ಜನ್ಮದಿನಕ್ಕೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದರ ಪ್ರೀತಿಯ ಕೊಡುಗೆಯನ್ನು ನೀಡಿ.
ನಮ್ಮ ಜನ್ಮದಿನಕ್ಕೆ ನೀವು ಮಾಡಬೇಕಾಗಿರುವುದು
- ಕೋವಿಡ್ ವ್ಯಾಕ್ಸೀನ್ ಹಾಕಿಸಿ – ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಿ
- ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಮಾಸ್ಕ್ ವಿತರಿಸಿ – ಕರೋನಾ ಹೊಡೆದಟ್ಟಿ
- ದೈಹಿಕ ಅಂತರವನ್ನು ಮರೆಯಬೇಡಿ – ಮಾಸ್ಕ್ ಧರಿಸದೇ ಹೊರಗಡೆ ಹೊರಡಬೇಡಿ
- ನಿಮ್ಮ ಮತ್ತು ನಿಮ್ಮ ಆತ್ಮೀಯರ ಆರೋಗ್ಯವನ್ನು ಕಾಪಾಡಲು ಕ್ರಮ ಕೈಗೊಳ್ಳಿ
- ಆರ್ಥಿಕವಾಗಿ ಹಿಂದುಳಿದವರಿಗೆ ಕೈಲಾದ ಸಹಾಯ ಮಾಡಿ
- ಏಪ್ರಿಲ್ 24 ಶನಿವಾರ ದಂದು, ನಮ್ಮ ಭೇಟಿಗೆ ಬರದೇ ನೀವು ಇದ್ದಲ್ಲಿಯೇ ಕರೋನಾ ಹೊಡದೋಡಿಸಲು ನಿಮ್ಮ ಕೈಲಾದ ಜಾಗೃತಿಯನ್ನು ಕೈಗೊಳ್ಳಿ ಎನ್ನುವುದು ನಮ್ಮ ಸವಿನಯ ಪ್ರಾರ್ಥನೆ.
ಶ್ರೀ ವಚನಾನಂದ ಮಹಾಸ್ವಾಮಿಗಳು,
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.