ERSS 112 : ಯುವತಿ ಮನವೊಲಿಸಿದ ಇ ಆರ್ ವಿ ಪೊಲೀಸ್:112 ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ

ದಾವಣಗೆರೆ: ಕೌಟುಂಬಿಕ ಕಲಹದಿಂದಾಗಿ ಮನೆ ತೊರೆದು ಬಂದಿದ್ದ ಯುವತಿಯನ್ನು 112 ಇಆರ್ ವಿ ಪೊಲೀಸ್ ತಂಡ ರಕ್ಷಿಸಿ ಆಕೆಯ ಕುಟುಂಬಕ್ಕೆ ಸೇರಿಸಿದೆ.
ಯುವತಿಯು ರಾಷ್ಟ್ರೀಯ ಹೆದ್ದಾರಿ -4ರ ಕಲ್ಪನಹಳ್ಳಿ ಬಳಿ ಮನೆಬಿಟ್ಟು ಬಂದು ಅಳುತ್ತಾ ಓಡಾಡುತ್ತಿದ್ದಳು. ಇದನ್ನು ಕಂಡ ಸ್ಥಳೀಯರು 112 ಇಆರ್ ವಿ ಗೆ ಕರೆ ಮಾಡಿದ್ದಾರೆ. ತಕ್ಷಣಕ್ಕೆ ಆಗಮಿಸಿದ ಇಆರ್ ವಿ ತಂಡವು ಯುವತಿಯಿಂದ ವಿಷಯ ತಿಳಿದು ಕುಟುಂಬಸ್ಥರಿಗೆ ಇನ್ನುಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುವಮಲಂತೆ ತಿಳಿಸಿದ್ದು, ಯುವತಿಗೂ ಬುದ್ದಿ ಹೇಳಿ ಕುಟುಂಬದ ಮಡಿಲಿಗೆ ಒಪ್ಪಿಸಿದೆ.