ERV 112: ರೈಲಿಗೆ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ ಮಾಡಿದ 112 ಇ ಆರ್ ವಿ ಪೊಲೀಸ್, ERV ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ದಾವಣಗೆರೆ: ನಗರದ ದೇವರಾಜ್ ಅರಸ್ ಬಡಾವಣೆಯ ಬಳಿಯಿರುವ ರೈಲ್ವೇ ಹಳಿ ಹತ್ತಿರ ರೈಲಿಗೆ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಓರ್ವ ಮಹಿಳೆ 112 ಇಆರ್ ವಿ ಪೊಲೀಸ್ ಸಿಬ್ಬಂದಿಗಳು ಆಕೆಯನ್ನು ರಕ್ಷಿಸಿದ್ದಾರೆ.ಘಟನೆ ಬಗ್ಗೆ ಕರೆ ಬಂದ ಕೂಡಲೇ 112 ERV ಪೊಲೀಸ್ ತಂಡ ಎಚ್ಚತ್ತು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸಂತ್ರಸ್ತೆಯನ್ನು ತಡೆದು, ಮನವೊಲಿಸಿ ತಿಳುವಳಿಕೆ ಹೇಳಿ ಮುಂದಿನ ಕ್ರಮಕ್ಕೆ ಮಹಿಳಾ ಠಾಣೆಗೆ ಒಪ್ಪಿಸಿದ್ದಾರೆ.