ಹತ್ತು ಲಕ್ಷ ರೂ. ಕಸಾಪ ಬಾಕಿ ಕಟ್ಟದಿರುವ ದಾವಣಗೆರೆ ಕ ಸ ಪಾ ಮಾಜಿ ಜಿಲ್ಲಾ ಅಧ್ಯಕ್ಷರು, ಕಸಪಾ ಆಕಾಂಕ್ಷಿ ಆರ್ ಶಿವಕುಮಾರ್ ಕುರ್ಕಿ ಆರೋಪ
ಹೆಚ್ ಎಂ ಪಿ ಕುಮಾರ್
ದಾವಣಗೆರೆ: ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ ತಮ್ಮ ಆಡಳಿತದ ಅವಧಿಯಲ್ಲಿ ಕೇಂದ್ರ ಕಸಾಪಕ್ಕೆ ನೀಡಬೇಕಾಗಿದ್ದ ೧೦ ಲಕ್ಷ ರೂ., ಬಾಕಿ ಹಣವನ್ನು ಇದುವರೆಗೂ ಉಳಿಸಿಕೊಳ್ಳಲಾಗಿರುವುದು ರಾಜ್ಯ ಕಸಾಪ ಹೊರಡಿಸಿರುವ ಬಾಕಿದಾರರ ಪಟ್ಟಿಯಲ್ಲಿ ಬಹಿರಂಗಗೊಂಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆರ್. ಶಿವಕುಮಾರಸ್ವಾಮಿ ಕುರ್ಕಿ ತಿಳಿಸಿದ್ದಾರೆ.
ಇಷ್ಟು ಬೃಹತ್ ಮಟ್ಟದ ಬಾಕಿ ಹಣವನ್ನು ಕೇಂದ್ರ ಕಸಾಪಕ್ಕೆ ಜಮಾ ಮಾಡದೆ ಬಾಕಿ ಉಳಿಸಿಕೊಂಡವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿರದ ಕಾರಣ ಇವರು ತಮ್ಮ ಅಳಿಯ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಅವರನ್ನು ಕಳೆದ ಕಸಾಪ ಚುನಾವಣೆಯಲ್ಲಿ ನಿಲ್ಲಿಸಿ ರಾಜಕೀಯ ತಂತ್ರದ ಮೂಲಕ ಅಧಿಕಾರ ಒದಗಿಸಿದ್ದರು ಎಂದು ಅವರು ದೂರಿದ್ದಾರೆ.
ಮಂಜುನಾಥ್ ಕುರ್ಕಿ ಅವರು ಆರು ವರ್ಷಗಳ ಕಾಲ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರೂ ಆ ಬಾಕಿ ಮೊತ್ತವನ್ನು ತೀರಿಸುವ ಗೋಜಿಗೆ ಹೋಗದೆ ತಮ್ಮ ಅಧಿಕಾರ ಅವಧಿ ಪೂರೈಸಿದ್ದಾರೆ. ಹಾಗಿದ್ದರೆ ಆ ಹಣವನ್ನು ಕಟ್ಟುವವರು ಯಾರು? ಇದಕ್ಕೆ ನ್ಯಾಯೋಚಿತ ಪರಿಹಾರ ನೀಡುವವರು ಯಾರೆಂದು ಪ್ರಶ್ನಿಸಿದ್ದಾರೆ.
ಕಸಾಪ ಅಧ್ಯಕ್ಷರಾಗಿರುವ ಮಂಜುನಾಥ್ ಕುರ್ಕಿ ಹಾಗೂ ಜಿಲ್ಲಾ ಸಮಿತಿಯ ಸದಸ್ಯರುಗಳು, ತಾಲ್ಲೂಕು ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಖಜಾಂಚಿಗಳು ತಮ್ಮ ಆಡಳಿತ ಅವಧಿಯಲ್ಲಿ ನಡೆಸಿದ ಸಂಪೂರ್ಣ ಲೆಕ್ಕಪತ್ರ ಅಜೀವ ಸದಸ್ಯರ ಮುಂದೆ ಪ್ರಸ್ತುತ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಬಾರಿ ಚುನಾವನೆಯಲ್ಲಿ ಸ್ಪರ್ಧೆ ನಡೆಸುತ್ತಿರುವ ದಾವಣಗೆರೆ ತಾಲ್ಲೂಕಿನ ಹಾಲಿ ಅಧ್ಯಕ್ಷರಾದ ಬಿ. ವಾಮದೇವಪ್ಪ ಹಾಗೂ ಹರಿಹರ ಅಧ್ಯಕ್ಷರಾದ ರೇವಣಸಿದ್ದಪ್ಪ ಅಂಗಡಿ ಅವರು ತಮ್ಮ ತಾಲ್ಲೂಕುಗಳಲ್ಲಿ ನಡೆಸಿದ ಸಮ್ಮೇಳನ, ಕಾರ್ಯಕ್ರಮಗಳ ಸಂಪೂರ್ಣ ಲೆಕ್ಕಪತ್ರವನ್ನು ಅಜೀವ ಸದಸ್ಯರ ಸಾಮಾನ್ಯ ಸಭೆ ಕರೆದು ನೀಡದೇ ಇರುವುದು ನೋಡಿದರೆ ಇವರುಗಳು ಹಿಂದಿನ ಅಧ್ಯಕ್ಷರೊಂದಿಗೆ ಸೇರಿ ಭ್ರಷ್ಟಾಚಾರದಲ್ಲಿ ಕೈಜೋಡಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ ಎಂದು ಆಪಾದಿಸಿದ್ದಾರೆ.
ಆದ್ದರಿಂದ, ರೇವಣಸಿದ್ದಪ್ಪ ಅಂಗಡಿ, ಬಿ. ವಾಮದೇವಪ್ಪ ಹಾಗೂ ಹೆಚ್.ಎಸ್. ಮಂಜುನಾಥ್ ಕುರ್ಕಿ ಈ ಮೂವರು ನೈತಿಕತೆ ಹೊತ್ತು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದಾರೆ.
ಕಳೆದ ಎರಡು ಬಾರಿ ನಡೆದ ಚುನಾವಣೆಯಲ್ಲೂ ನಾನು ಸ್ಪರ್ಧಿಸಿ ಹಣಬಲವಿರುವ ಮಂದಿಯ ವಿರುದ್ಧ ಸೋಲು ಕಾಣಬೇಕಾಯಿತು. ಆದ್ದರಿಂದ ಈ ಬಾರಿ ಕನ್ನಡದ ಸೇವೆ ಮಾಡಲು ಮತದಾರರು ಮತಭಿಕ್ಷೆ ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಳೆದ ಎರಡು ಬಾರಿ ನಡೆದ ಚುನಾವಣೆಯಲ್ಲೂ ನಾನು ಸ್ಪರ್ಧಿಸಿ ಹಣಬಲವಿರುವ ಮಂದಿಯ ವಿರುದ್ಧ ಸೋಲು ಕಾಣಬೇಕಾಯಿತು. ಆದ್ದರಿಂದ ಈ ಬಾರಿ ಕನ್ನಡದ ಸೇವೆ ಮಾಡಲು ಮತದಾರರು ಮತಭಿಕ್ಷೆ ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಗರುಡಾ ವಾಯ್ಸ್ ಗೆ ಡಾ.ಮಂಜುನಾಥ್ ಕುರ್ಕಿ ಪ್ರತಿಕ್ರಿಯೆ.