Ex Mayor Debt Congres Ask Investigation: 7 ತಿಂಗಳಲ್ಲಿ 5.6 ಕೋಟಿ ಬಡ್ಡಿ ಕಟ್ಟಿರುವ ಮಾಜಿ ಮೇಯರ್ ಅಜಯ್ ಕುಮಾರ್ ಆದಾಯದ ಬಗ್ಗೆ ತನಿಖೆಗೆ ಆಗ್ರಹ.! ಹರೀಶ್ ಬಸಾಪುರ
ಕೇವಲ 7 ತಿಂಗಳಲ್ಲಿ 5.6 ಕೋಟಿ ಬಡ್ಡಿ ಕಟ್ಟಿರುವ ಮಾಜಿ ಮೇಯರ್ ಅಜಯ್ ಕುಮಾರ್ ಆದಾಯದ ಬಗ್ಗೆ ತನಿಖೆ ಯಾವಾಗ..?
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಜಯ್ ಕುಮಾರ್ ರವರು ಸಮಾರಂಭವೊಂದರಲ್ಲಿ ಮಾತನಾಡುವಾಗ ತಾವು 7 ತಿಂಗಳಲ್ಲಿ 5 ಕೋಟಿ 60 ಲಕ್ಷ ಬಡ್ಡಿ ಕಟ್ಟಿರುವುದಾಗಿ ತಿಳಿಸಿದ್ದಾರೆ.
ಅದು ಅವರ ವೈಯಕ್ತಿಕ ವಿಷಯವೇ ಆದರೂ ಸಾರ್ವಜನಿಕ ಜೀವನದಲ್ಲಿರುವ ಒಬ್ಬ ರಾಜಕಾರಣಿಯಾಗಿ ಅವರು ಜನರಿಗೆ ಉತ್ತರಿಸಲೇ ಬೇಕಾಗಿದೆ. ತಾವು ಕಟ್ಟಿರುವ ಬಡ್ಡಿ ಹಣದ ಮಾಹಿತಿಯನ್ನು ತಮ್ಮ ವಾರ್ಷಿಕ ಆದಾಯ ತೆರಿಗೆ ಮಾಹಿತಿ ಸಲ್ಲಿಸುವಾಗ ದಾಖಲಿಸಿದ್ದಿರಾ..?
ಈ ಮಾಹಿತಿಯನ್ನು ಆದಾಯ ತೆರಿಗೆ ಸಲ್ಲಿಸುವಾಗ ದಾಖಲಿಸದಿದ್ದರೆ ಸರ್ಕಾರ ಕೂಡಲೇ ತನಿಖೆ ನಡೆಸಿ ಸತ್ಯಾಸತ್ಯತೆ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಬೇಕಾಗಿದೆ.
ಅವರು ಮೇಯರ್ ಆಗಿದ್ದಂತಹ ಅವಧಿಯ ಆಡಳಿತ ಚಟುವಟಿಕೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಸಾರ್ವಜನಿಕರ ಪರವಾಗಿ ಕೇಳಿಕೊಳ್ಳುತ್ತೇನೆ.
ಕೆ.ಎಲ್.ಹರೀಶ್ ಬಸಾಪುರ. ಕಾಂಗ್ರೆಸ್ ಮುಖಂಡ.