ಮಂಜುನಾಥ್ ಗಡಿಗುಡಾಳ್‌ರವರ ಹೇಳಿಕೆಗೆ ಪಾಲಿಕೆ ಮಾಜಿ ಸದಸ್ಯ ಮಂಜುನಾಥ ನಾಯ್ಕ ಎಸ್. ತೀವ್ರ ಆಕ್ಷೇಪ

ex-member-of-the-corporation-manjunath-nayka-s-strongly-objected-to-the-statement-of-manjunath-gadigudal

ದಾವಣಗೆರೆ: ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ ಗಡಿಗುಡಾಳ್‌ರವರು ನಮ್ಮ ನಾಯಕ ಲೋಕಿಕೆರೆ ನಾಗರಾಜ್‌ರವರು ಟಿಕೆಟ್ ಪಡೆದ ರೀತಿ ಮತ್ತು ಸಮಾಜಕ್ಕೇನು ನಿಮ್ಮ ಕೊಡುಗೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಪ ಅವರ ಮನೆ ಬಾಗಿಲಿಗೆ ಪೋಸ್ಟ್ ಮೂಲಕ ಪಾಲಿಕೆ ಟಿಕೆಟ್ ಕೊರಿಯರ್ ಬಂದಿತ್ತು ಎಂದು ಕಾಣಿಸುತ್ತದೆ.

ಇಲ್ಲ ಎಸ್.ಎಸ್.ಮಲ್ಲಿಕಾರ್ಜುನ್‌ರವರು ಸ್ವತಃ ಮಂಜುನಾಥ್‌ರವರ ಮನೆಗೆ ಹೋಗಿ ನೀವು ನಿಂತರೆ ನಮ್ಮ ಪಕ್ಷ ಗೆಲ್ಲುತ್ತದೆ ಪಾಲಿಕೆ ನಮ್ಮದಾಗುತ್ತದೆ ಎಂದು ಕೈಕಾಲು ಹಿಡಿದು ಟಿಕೆಟ್ ಕೊಟ್ಟು ನಿಮ್ಮನ್ನು ಗೆಲ್ಲಿಸಿರಬೇಕು ಎಂದು ಕಾಣುತ್ತದೆ.

ಮಾನ್ಯ ಪಾಲಿಕೆ ಮಾಜಿ ಸದಸ್ಯರು ಒಂದು ಶಿಸ್ತಿನ ಪಕ್ಷದ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಎಚ್ಚರಿಸಬಯಸುತ್ತೇವೆ. ಲೋಕಿಕೆರೆ ನಾಗರಾಜ್‌ರವರು ಯಾರ ಕೈಕಾಲು ಹಿಡಿದಿಲ್ಲ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ನೀವೆಷ್ಟು ಬಕೆಟ್ ಹಿಡಿದರೂ ನೀವು ಈ ಜನ್ಮದಲ್ಲಿ ದಾವಣಗೆರೆ ಎಂ.ಎಲ್‌ಎ ಟಿಕೆಟ್ ಪಡೆದು ನಿಲ್ಲಲು ಸಾಧ್ಯವಿಲ್ಲ. ನಮ್ಮ ಬಿಜೆಪಿಯಲ್ಲಿ ಶ್ರೀ ಸಾಮಾನ್ಯರಿಗೂ ಅವರ ಕೆಲಸ ನಿಷ್ಠೆ ಬದ್ಧತೆ ಪ್ರಾಮಾಣಿಕತೆ ಗುರುತಿಸಿ ಭಾರತೀಯ ಜನತಾಪಾರ್ಟಿ ಸಾಕಷ್ಟು ಸಮೀಕ್ಷೆ ಮಾಡಿ ವರದಿ ಪಡೆದು ಯಾವ ವ್ಯಕ್ತಿ ಸೂಕ್ತ ಎಂದು ಆರಿಸಿ ಟಿಕೆಟ್ ನೀಡುತ್ತದೆ.

ತಾವು ಬಹುಶಃ ಮತಿಭ್ರಮಣರಾಗಿರಬೇಕೆಂದು ಅನ್ನಿಸುತ್ತದೆ. ಯಾಕೆಂದರೆ ಲೋಕಿಕೆರೆ ನಾಗರಾಜ್‌ರವರು ಯಾವುದೇ ಅಧಿಕಾರ ಇಲ್ಲದಿದ್ದರೂ ಸಹ ದೇಹಿ ಎಂದು ಯಾರೇ ಬಂದರೂ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ

ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ರೈತರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ, ಆಟೋಚಾಲಕರಿಗೆ, ಶಾಲಾ ವಾಹನ ಚಾಲಕರಿಗೆ, ಗೂಡ್ಸ್ ಆಟೋ ಚಾಲಕರಿಗೆ, ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್‌ಗಳಿಗೆ, ಕಲಾವಿದರಿಗೆ, ವಕೀಲರಿಗೆ, ಚಿತ್ರಮಂದಿರ ಕಾರ್ಮಿಕರಿಗೆ, ಪೌರಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕಕರಿಗೆ, ಮಂಗಳಮುಖಿಯರಿಗೆ, ಸಿಟಿ ಬಸ್ ಚಾಲಕರಿಗೆ, ಸವಿತಾ ಸಮಾಜದ ಸದಸ್ಯರಿಗೆ, ಎಪಿಎಂಸಿ ಹಮಾಲರಿಗೆ, ಗೂಡ್‌ಶೆಡ್ ಹಮಾಲರಿಗೆ, ಟ್ಯಾಕ್ಸಿ ಚಾಲಕರಿಗೂ ಒಳಗೊಂಡAತೆ 30,000 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ನೀಡಿ ಜನರ ಕಾಳಜಿ ಏನು ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ತೋರಿಸಿದ್ದಾರೆ.

ಅಲ್ಲದೇ ರೈತರಿಗೆ ಬೀಜ ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳನ್ನು ಉಚಿತವಾಗಿ ನೀಡಿದ್ದರು, ಅಂಗವಿಕಲರು, ಶ್ರವಣದೋಷವುಳ್ಳವರು, ವಿಕಲಚೇತನರಿಗೆ ಉಚಿತವಾಗಿ ಶ್ರವಣ ಉಪಕರಣ, ಊರುಗೋಲು ಮತ್ತು ಗಾಡಿಗಳನ್ನು ನೀಡಿದ್ದು. ಇಂದಿಗೂ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ನಿಷ್ಠಾವಂತ ಪ್ರಾಮಾಣಿಕ ಹೋರಾಟಗಾರರಾಗಿದ್ದು, ಅವರ ಕೆಲಸಗಳು ಅವರ ಸೇವೆಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಅವರು ಸುಮಾರು ಏಳೆಂಟು ವರ್ಷಗಳಿಂದ ಜನಸಾಮಾನ್ಯರ ಕಾರ್ಯಕ್ರಮಗಳನ್ನು ಗುರುತಿಸಿ ಹೃದಯವಂತ ಲೋಕಿಕೆರೆ ನಾಗರಾಜ್ ಎಂದೇ ಜನರ ಮನದಲ್ಲಿ ಮನೆ ಮಾಡಿದ್ದಾರೆ.

ಯಾರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡುವುದು ಸೂಕ್ತ ಬಿಜೆಪಿ ಕೊಡುಗೆ ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಮಾತ್ರ. ಮಂಜುನಾಥ್ ಗಡಿಗುಡಾಳ್‌ರವರು ತಮ್ಮ ಗಡಿದಾಟಿ ವರ್ತಿಸುತ್ತಿರುವುದು ಮಂಗನಿಗೆ ಅಧಿಕಾರದ ಹೆಂಡ ಕುಡಿಸಿದಂತಾಗಿದೆ ಅಷ್ಟೇ. ಬಿಜೆಪಿ ಕೊಡುಗೆ ದಾವಣಗೆರೆ ಜಿಲ್ಲೆ ಹೇಳುತ್ತದೆ.

ನಿಮ್ಮಂತೆ ಕಾನೂನು ಸುವ್ಯವಸ್ಥೆ ಅಭದ್ರಗೊಳಿಸುವುದು. ಕ್ಲಬ್‌ಗಳಿಗೆ ಮತ್ತು ಪರ್ಮಿಷನ್ ನೀಡಿ ಜಿಲ್ಲೆಯ ಸ್ವಾಸ್ಥ್ಯ ಹಾಳು ಮಾಡುವುದು. ಜಿಲ್ಲೆಯಲ್ಲಿ ಅರಾಜಕತೆ ಉಂಟು ಮಾಡುವುದು ಬಿಜೆಪಿಯ ಕೊಡುಗೆ ಅಲ್ಲ. ಮೊದಲು ವ್ಯಕ್ತಿಗತ ಟೀಕೆ ಬಿಟ್ಟು ಆಡಳಿತದವರಾಗಿ ದಾವಣಗೆರೆ ಜಿಲ್ಲೆಯನ್ನು ಕಾನೂನು ವ್ಯವಸ್ಥೆ ಭದ್ರಗೊಳಿಸಿ ಅದೇ ನಿಮ್ಮ ಕೊಡುಗೆ ಎಂದು 34ನೇ ವಾರ್ಡ್ನ ಮಾಜಿ ಮಹಾನಗರ ಪಾಲಿಕೆ ಸದಸ್ಯರು ಮಂಜುನಾಯ್ಕ ಎಸ್. ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!