ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಕೊರೊನಾ ಪಾಸಿಟಿವ್; ಮೈ ಜುಂ ಎನ್ನಿಸುತ್ತೆ ಶಾಸಕರ ಭಾನುವಾರದ ದಿನಚರಿ

ದಾವಣಗೆರೆ (ಏಪ್ರಿಲ್ 18): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕೊರೋನಾ ಸೋಂಕು ತಗುಲಿತ್ತು.
ಇದಾದ ಎರಡೇ ದಿನಕ್ಕೆ ಇದೀಗ ಮಾಜಿ ಸಚಿವ, ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಗಳ
ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರೀಗ ಹೊನ್ನಾಳಿಯ ಮನೆಯಲ್ಲೇ ಐಸೊಲೇಷನ್ ಆಗಿದ್ದು, ತನ್ನ ಜೊತೆಗಿದ್ದವರೂ ಸಹ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಮುಂಜಾಗ್ರತೆ ವಹಿಸಿ ಎಂದು ವಿನಂತಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಎಂ.ಪಿ. ರೇಣುಕಾಚಾರ್ಯ, “ನನಗೆ ಕೋವಿಡ್
ಸೋಂಕು ಪತ್ತೆಯಾಗಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಐಸೋಲೇಶನ್ ಗೆ ಒಳಗಾಗಿದ್ದೇನೆ. ಇತ್ತೀಚೆಗೆ ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಆದಷ್ಟು ಬೇಗ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ” ಎಂದಿದ್ದಾರೆ.

ಇಂದು ಬೆಳಗ್ಗೆ ಹೊನ್ನಾಳಿ ಪಟ್ಟಣದ ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ತೆಗೆದುಕೊಂಡು ಕ್ರಮಗಳ ಬಗ್ಗೆ ರೇಣುಕಾಚಾರ್ಯ ಪರಿಶೀಲನೆ ನಡೆಸಿದ್ದರು.
ಹನುಮಸಾಗರ ತಾಂಡದಲ್ಲಿ ₹16.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿ ಕೋವಿಡ್ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಮಹಿಳೆಯರಿಂದ ಆಶೀರ್ವಾದ.
ಬಲಮುರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೊರೋನ ಜಾಗೃತಿ ಮೂಡಿಸಿದರು.
ದಾವಣಗೆರೆ ಜಿಲ್ಲೆಯ ಕೊರೋನಾ ಮಾಹಿತಿ
- ದಾವಣಗೆರೆ 133 ಕೊರೊನಾ ಪಾಸಿಟಿವ್
- 597 ಸಕ್ರಿಯ
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ ಜಿಲ್ಲೆಯಲ್ಲಿ 133 ಕೇಸ್ ಗಳು ಪತ್ತೆಯಾಗಿದ್ದು, ದಾವಣಗೆರೆ ಒಂದರಲ್ಲಿಯೇ 96 ಪ್ರಕರಣಗಳು ಪತ್ತೆಯಾಗಿವೆ.ಈ ಮೂಲಕ ಸೋಂಕಿತರ ಸಂಖ್ಯೆ 23,467ಕ್ಕೆ ಏರಿಕೆಯಾಗಿದೆ.
ಇಂದು 39 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 22,606 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 264 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಿ ಇನ್ನು 597ಸಕ್ರಿಯ ಕೇಸ್ ಗಳಿವೆ. ದಾವಣಗೆರೆ 96, ಹರಿಹರ 26, ಜಗಳೂರು 04, ಚನ್ನಗಿರಿ 02, ಹೊನ್ನಾಳಿ 02 ಹಾಗೂ ಹೊರ ಜಿಲ್ಲೆಯಿಂಧ 03 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕರ್ನಾಟಕ ರಾಜ್ಯದ ಕೊವಿಡ್ ಮಾಹಿತಿ
ಭಾನುವಾರವಾದ ಇಂದು ರಾಜ್ಯದಲ್ಲಿ ಕರೋನಾ ರೌದ್ರಾವತಾರ ತಾಳಿದೆ. ನಿತ್ಯ ತನ್ನದೇ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಒಂದೇ ದಿನ ಪಾಸಿಟಿವ್ ಕೇಸ್ ಗಳ ಸಂಖ್ಯೆ 20 ಸಾವಿರದ ಸಮೀಪದಲ್ಲಿದೆ. ರಾಜ್ಯದಲ್ಲಿಂದು ಬರೋಬ್ಬರಿ 19,067 ಮಂದಿಯ ಕೋವಿಡ್ ರಿಪೋರ್ಟ್
ಪಾಸಿಟಿವ್ ಬಂದಿದ್ದು, 81 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 12,793 ಪಾಸಿಟಿವ್
ಪ್ರಕರಣಗಳು ದಾಖಲಾಗಿದೆ. ಬೆಂಗಳೂರಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಇಂದು 60 ಮಂದಿ ಸಾವಿನ ಮನೆ ಸೇರಿದ್ದಾರೆ. ಚಿತಾಗಾರಗಳ ಮುಂದೆ ಹೆಣಗಳ ಸಾಲು ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಪಾಸಿಟಿವ್ ಕೇಸ್‌ಗಳ ಸಂಖ್ಯೆ 20 ಸಾವಿರದ ಸನಿಹದಲ್ಲಿದ್ದರೆ ಗುಣಮುಖರಾದವರ ಸಂಖ್ಯೆ
ಕೇವಲ 4,603,620 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲಿ ಚಿಕಿತ್ಸೆ. ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ
ಕೇಕ್ಗಳ ಸಂಖ್ಯೆ 11,61,065ಕ್ಕೆ ಏರಿಕೆಯಾಗಿದ್ದರೆ, 1,33,543 ಸಕ್ರಿಯ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ
ಕೊರೋನಾಗೆ ಬಲಿಯಾದವರ ಸಂಖ್ಯೆ 13,351ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಈವರೆಗೆ ಸೋಂಕಿನಿಂದ 5,123 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರೇ ಹೆಮ್ಮಾರಿಯ ಟಾರ್ಗೆಟ್..
ರಾಜ್ಯದಲ್ಲಿಂದು ದಾಖಲೆಯ ಪ್ರಮಾಣದಲ್ಲಿ
ಕೊರೋನಾ ಕೇಸ್ ಗಳು ಪತ್ತೆಯಾಗಿದ್ದರೂ
ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ
ಸಾವಿರಕ್ಕಿಂತ ಹೆಚ್ಚು ಸೊಂಕು ದಾಖಲಾಗಿಲ್ಲ.
ಬೆಂಗಳೂರಲ್ಲಿ ಇಂದು 12,793 ಪಾಸಿಟಿವ್
ಕೇಸ್ ಗಳು ದಾಖಲಾಗಿವೆ. ಆದರೆ ಉಳಿದ
ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ ಗಳ ಸಂಖ್ಯೆ ಸಾವಿರ
ದಾಟಿಲ್ಲ. ಬೆಂಗಳೂರು ನಗರ ನಂತರದಲ್ಲಿ
ಮೈಸೂರು ಜಿಲ್ಲೆಯಲ್ಲಿ 777 ಕೇಸ್ ಗಳು
ದಾಖಲಾಗಿವೆ. ಕಲಬುರಗಿಯಲ್ಲಿ 671,
ತುಮಕೂರಲ್ಲಿ 494, ಬೀದರ್ ನಲ್ಲಿ 469,
ಹಾಸನದಲ್ಲಿ 348, ಮಂಡ್ಯದಲ್ಲಿ 338,
ಧಾರವಾಡದಲ್ಲಿ 265, ಬಳ್ಳಾರಿಯಲ್ಲಿ 238
ದಾಖಲಾಗಿವೆ. ಕಲಬುರ್ಗಿಯಲ್ಲಿ 671,
ತುಮಕೂರಲ್ಲಿ 494, ಹಾಸನದಲ್ಲಿ 348,
ಮಂಡ್ಯದಲ್ಲಿ 338,ಧಾರವಾಡದಲ್ಲಿ 265, ಬಳ್ಳಾರಿಯಲ್ಲಿ 238ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಬೆಂಗಳೂರಲ್ಲಿ ವ್ಯಾಪಕವಾಗಿ ಹರಡುತ್ತಿರುವ
ಕೊರೋನಾಗೆ ಕಡಿವಾಣ ಹಾಕಲು ನಾಳೆಯಿಂದ
ಕಠಿಣ ನಿಯಮಗಳನ್ನು ಜಾರಿಗೆ ತರಲು
ಮುಂದಾಗಿರುವ ಸರ್ಕಾರ ಇಂದು ಪೂರ್ವಭಾವಿ
ಸಭೆ ನಡೆಸಿತು. ಗೃಹ ಸಚಿವ ಬಸವರಾಜ್
ಬೊಮ್ಮಾಯಿ, ಕಂದಾಯ ಸಚಿವ
ಆರ್.ಅಶೋಕ್, ಆರೋಗ್ಯ ಸಚಿವ
ಕೆ.ಸುಧಾಕರ್ ಅವರು ಕುಮಾರಕೃಪ
ಅತಿಥಿಗೃಹದಲ್ಲಿ ಪೂರ್ವಭಾವಿ ಸಭೆ ಮಾಡಿ
ಚರ್ಚೆ ನಡೆಸಿದರು.