Excise: ಶಾಲಾ-ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದರೆ ಅಬಕಾರಿ ಇಲಾಖೆಗೆ ದೂರು ಸಲ್ಲಿಸುವಂತೆ ಶಿಕ್ಷಣ ಇಲಾಖೆಯಿಂದ ಆದೇಶ

ಬೆಂಗಳೂರು:(Excise) ಘನ ಉಚ್ಚನ್ಯಾಯಾಲಯದ ಜುವಿನ್ನೆಲ್ ಜಸ್ಟೀಸ್ ಕಮಿಟಿಯ ಸಭೆಯಲ್ಲಿ ಚರ್ಚಿತವಾಗಿರುವ ವಿಷಯಗಳ ಕುರಿತು ಮೂಡಿಸುವ ಸಂಬಂಧ ಕ್ರಿಯಾ ಯೋಜನೆ (Action Plan) ರೂಪಿಸುವ ಬಗ್ಗೆ ಸರ್ಕಾರದ ವತಿಯಿಂದ ಜ್ಞಾಪನ ಪತ್ರ ಹೊರಡಿಸಲಾಗಿದೆ.
ಆಯುಕ್ತರು ಅಬಕಾರಿ ಇಲಾಖೆಯವರು ಸರ್ಕಾರಕ್ಕೆ ಬರೆದಿರುವ ತಮ್ಮ ಪತ್ರದಲ್ಲಿ ಉಪ ಕಾರ್ಯದರ್ಶಿಗಳು, ಜುವಿನೈಲ್ ಜಹೀ ಕಮಿಟಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ರವರು ದಿನಾಂಕ: 12.10.2023 ರಂದು ನಡೆಸಿರುವ ಸಭೆಯಲ್ಲಿ, ಪುಸ್ತಾಪಿಸಿರುವ ಅಂಶಗಳಂತೆ.
ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸುತ್ತಾ ಈ ಕುರಿತು ಅಬಕಾರಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.
ವ್ಯಸನ ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿ ಕಾರ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಮತ್ತು ಅಬಕಾರಿ ಇಲಾಖೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಲಾಗಿದೆ.
ಅದರಂತೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ. ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಿ ಸೂಕ್ತ ಕ್ರಮವಹಿಸಲು ತಿಳಿಸಿದೆ ಎಂದು 10.02.2025 ರಂದು ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರೌಢ ಶಿಕ್ಷಣ) ಜ್ಞಾಪನ ಪತ್ರ ಹೊರಡಿಸಿದ್ದಾರೆ