ಕೊಪ್ಪಳ : ಎಸಿಬಿ ಬಲೆಗೆ ಬಿದ್ದ ಅಬಕಾರಿ ಡಿಸಿ ಸೆಲೀನಾ!
ಕೊಪ್ಪಳ: ಹೊಸ ಬಾರ್‌ಗೆ ಲೈಸೆನ್ಸ್ ನೀಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಲ್ಲಿನ ಅಬಕಾರಿ ಡಿ.ಸಿ. ಸೆಲೀನಾ ಎಸಿಬಿ ಅಧಿಕಾರಿಗಳು ತೋಡಿದ್ದ ಖೆಡ್ಡಕ್ಕೆ ಬಿದ್ದಿದ್ದಾರೆ. ಹೊಸ ಬಾರ್‌ಗೆ ಲೈಸೆನ್ಸ್ ನೀಡುವುದಕ್ಕಾಗಿ ಶೈಲಜಾ ಪ್ರಭಾಕರಗೌಡ ಎನ್ನುವವರಿಗೆ ಮೂರು ಲಕ್ಷಕ್ಕೆ ಬೇಡಿಕೆ ಇಟಿದ್ದರು. ಬೇಡಿಕೆ ಇಟ್ಟಿದ್ದ ಮೂರು ಲಕ್ಷ ರೂಗಳಲ್ಲಿ ಒಂದು ಲಕ್ಷ ಹಣ ತೆಗೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸಾಕ್ಷ ಸಮೇತ ಹಿಡಿದಿದ್ದಾರೆ.
ಇದೇ ರೀತಿ ಮೇ 10 ರಂದು ಚಿತ್ರದುರ್ಗದ ಅಬಕಾರಿ ಡಿಸಿಯವರನ್ನು ಸಹ ಟ್ರಾಪ್ ಮಾಡಿ ಲಂಚ ಸ್ವೀಕರಿಸುವಾಗ ಹಿಡಿದಿದ್ದರು. ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಕಚೇರಿಯಲ್ಲಿ ಎಕ್ಸೆಸ್ ಡಿಸಿ ನಾಗಶಯನ ಎಸಿಬಿ ಬಲೆಗೆ ಬಿದ್ದದ್ದರು. NAGASHAYANA EXCISE DEPUTY COMMISSIONER CHITRADURGA ಅಬಕಾರಿ ಡಿಸಿ ಜೊತೆಗೆ ಇವರ ವಾಹನ ಚಾಲಕ ಮೌಸಿನ್ ಖಾನ್ ಕೂಡ ಬಲೆಗೆ ಬಿದ್ದಿದ್ದರು.
ಬಾರ್ ಲೈಸನ್ಸ್ ರಿನಿವಲ್‌ಗಾಗಿ 3 ಲಕ್ಷ 28 ಸಾವಿರ ಹಣಕ್ಕೆ ಅಬಕಾರಿ ಡಿಸಿ ನಾಗಶಯನ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1 ಲಕ್ಷ 28 ಸಾವಿರ ರೂಪಾಯಿ ಮುಂಗಡ ಹಣವನ್ನ ಪಡೆದಿದ್ದರು.BAR LICENCE RENEWAL 2 ಲಕ್ಷ 28 ಸಾವಿರ ರೂಪಾಯಿ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು ನಾಗಶಯನ. ಚಿತ್ರದುರ್ಗದ ಪ್ರಖ್ಯಾತ ಬಾರ್ ಮಾಲೀಕ ಹಾಗೂ ಉದ್ಯಮಿ ಬಾಬುರೆಡ್ಡಿ BAR OWNER EX ZP MEMBER ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು.
ಬಾಬುರೆಡ್ಡಿ ಚಿತ್ರದುರ್ಗದಲ್ಲಿ ಬೃಹತ್ ಹೋಟೆಲ್ ಉದ್ಯಮಿ ಅಲ್ಲದೇ ಅವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೂಡ ಆಗಿದ್ದರು.
ಚಿತ್ರದುರ್ಗದ ಎಸಿಬಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಅಬಕಾರಿ ಡಿಸಿ ನಾಗಶಯನ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದವು. ಎಸಿಬಿ ಬಲೆಗೆ ಬಿದ್ದಿರುವ ಅಬಕಾರಿ ಡಿಸಿ ನಾಗಶಯನ ಪತ್ನಿ ಕವಿತಾ ಐಪಿಎಸ್ ಅಧಿಕಾರಿ ಆಗಿದ್ದಾರೆ, ನಾಗಶಯನ ಅವರಿಗೆ ರಾಜಕೀಯ ವಲಯದಲ್ಲೂ ಭಾರೀ ಪ್ರಭಾವಿಗಳ ಹಿನ್ನೆಲೆ ಹೊಂದಿದ್ದರು. ಹೀಗೆ ಸಮಾಜದಲ್ಲಿ ಭ್ರಷ್ಟಾಚಾರ, ಲಂಚಗುಳಿತನ ವ್ಯಾಪಕವಾಗಿ ನಡೆಯುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕಿದೆ.
garudavoice21@gmail.com 9740365719